ನೂತನ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿಗೆ ಕಸಾಪ ವತಿಯಿಂದ ಸನ್ಮಾನ

ಭಾಲ್ಕಿ: ಆ.5:ಪಟ್ಟಣದ ತಹಸೀಲ ಕಚೇರಿಯಲ್ಲಿ, ನೂತನವಾಗಿ ಗ್ರೇಡ್ 1 ತಹಸೀಲ್ದಾರರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ವಡ್ಡನಕೇರಿಯವರಿಗೆ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮತ್ತು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿಯವರು, ಈ ಹಿಂದೆ ನಾನು ಭಾಲ್ಕಿಯ ತಹಸೀಲ ಕಚೇರಿಯಲ್ಲಿ, ಗ್ರೇಡ್2 ತಹಸೀಲ್ದಾರನಾಗಿ ಸೇವೆ ಸಲ್ಲಿಸಿದ್ದೆನೆ. ಇಲ್ಲಿಯ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿದೇನೆÉ. ಕೋವಿಡ್ 19 ಸಂದರ್ಭದಲ್ಲಿ ಉತ್ತಮ ಸೇವೆ ನಿರ್ವವಹಿಸಿದ್ದೇವೆ. ಈ ಅನುಭವದಿಂದಲೇ ಭಾಲ್ಕಿಯ ನೆಲದಲ್ಲಿ ನನಗೆ ಸೇವೆಸಲ್ಲಿಸಲು ಮತ್ತೆ ಅನುವು ಮಾಡಿಕೊಡಲಾಗಿದೆ. ಇನ್ನುಮುಂದೆಯೂ ಇಲ್ಲಿಯ ಜನರ ಕುಂದು ಕೊರತೆಗಳು, ಸೇರಿದಂತೆ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ನನ್ನ ಮೇಲೆ ಅಭಿಮಾನವಿಟ್ಟು ಕಸಾಪ ತಾಲೂಕು ಘಟಕದ ವತಿಯಿಂದ ಗೌರವ ಸಲ್ಲಿಸಿರುವುದಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಕಸಾಪ ತಾಲೂಕು ಘಟಕದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಸನ್ಮಾನ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ನಗರಘಟಕದ ಅಧ್ಯಕ್ಷ ಸಂತೊಷ ಬಿಜಿಪಾಟೀಲ, ಪ್ರಮುಖರಾದ ಹಣಮಂತ ಕಾರಾಮುಂಗೆ, ಭದ್ರೇಶ ಗುರಯ್ಯಾ ಸ್ವಾಮಿ, ಐಜಿಕ ಬಂಗಾರೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸೋಮನಾಥ ತರನಳ್ಳೆ, ಬೊಮ್ಮಣ್ಣ ಮಡಿವಾಳ, ಪರಶುರಾಮ ತಳವಾರ ಮುಂತಾದವರು ಇದ್ದರು. ನಾಗಭೂಷಣ ಸ್ವಾಗತಿಸಿದರು. ಸಂತೋಷ ನಿರೂಪಿಸಿದರು. ಹಣಮಂತ.ಕೆ ವಂದಿಸಿದರು.