ನೂತನ ತಹಶೀಲ್ದಾರ್ ಅಧಿಕಾರ ಸ್ವೀಕಾರ

ಕುಣಿಗಲ್, ಮೇ ೨೨- ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಮಹಾಬಲೇಶ್ವರ ಅಧಿಕಾರ ಸ್ವೀಕರಿಸಿದ್ದಾರೆ.
ತಾಲ್ಲೂಕಿಗೆ ಹಲವಾರು ತಿಂಗಳಿಂದ ಖಾಯಂ ತಹಶೀಲ್ದಾರ್ ಇಲ್ಲದೆ ನಿಗದಿತ ಕೆಲಸ ಕಾರ್ಯಗಳು ಹಾಗೂ ಕೊರೊನಾ ರೋಗ ತಾಲ್ಲೂಕಿನಲ್ಲಿ ಸಮನ್ವಯ ಕೊರತೆ, ಸೂಕ್ತ ಮಾರ್ಗದರ್ಶನ ಇಲ್ಲ ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಕಂದಾಯ ಇಲಾಖೆಯ ಆಡಳಿತ ಕುಸಿದ ಪರಿಣಾಮ ಕೊನೆಗೂ ಸರ್ಕಾರ ತಾಲ್ಲೂಕಿಗೆ ನೂತನ ತಹಶೀಲ್ದಾರ್ ನೇಮಿಸಿದೆ.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ನೂತನ ತಹಶೀಲ್ದಾರ್ ಮಹಾಬಲೇಶ್ವರ್ ಅವರು, ದೀನ ದಲಿತರು, ರೈತರು ಹಿಂದುಳಿದ ವರ್ಗದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯವಾಗದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಕೊರೊನಾ ರೋಗವನ್ನು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಮುಖ್ಯಸ್ಥರನ್ನು ಸಭೆ ನಡೆಸುವ ಮೂಲಕ ರೋಗವನ್ನು ಹತೋಟಿಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಾರ್ವಜನಿಕರು ಗ್ರಾಮೀಣ ಭಾಗದಲ್ಲಿ ರೋಗ ಹರಡದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಮಹಾಬಲೇಶ್ವರ ಅವರು ಇದಕ್ಕೂ ಮುನ್ನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.