ನೂತನ ತಂತ್ರಜ್ಞಾನದ ಮೂಲಕ ಆಸ್ತಿ ನೋಂದಣಿ ಕಾರ್ಯಕ್ಕೆ ಚಾಲನೆ

ಲಕ್ಷ್ಮೇಶ್ವರ,ಮೇ24: ಭೂ ದಾಖಲೆಗಳ ನೊಂದಣಿಗೆ ರಾಜ್ಯ ಸರ್ಕಾರ ನೂತನ ತಂತ್ರಜ್ಞಾನ ಕಾವೇರಿ-2ನ್ನು ಜಾರಿಗೊಳಿಸಿದ್ದು, ಈ ತಂತ್ರಜ್ಞಾನದ ಮೂಲಕ ಆನ್‍ಲೈನ್ ಸುಲಭವಾಗಿ ಆಸ್ತಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಭೂದಾಖಲೆಗಳ ನೊಂದಾವಣಾಧಿಕಾರಿ ಮಹಾಂತೇಶ ಪಟತ್ತರ ಹೇಳೀದರು. ಪಟ್ಟಣದ ಎಪಿಎಂಸಿ ಯಾರ್ಡ ಹತ್ತಿರ ಇರುವ ಸಬ್‍ರಜಿಸ್ಟರ್ ಕಚೇರಿಯಲ್ಲಿ ಮಂಗಳವಾರ ನೂತನ ತಂತ್ರಜ್ಞಾನ ಕಾವೇರಿ-2ಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಆಸ್ತಿ ಖರೀದಿ ಮಾಡಿಕೊಳ್ಳಲು ಹಾಗೂ ಮಾರಾಟ ಮಾಡಲು ಸಬ್ ರಜಿಸ್ಟಾರ್ ಕಚೇರಿಯಲ್ಲಿ ದಿನಗಟ್ಟಲೆ ಕಾಯುವ ಸ್ಥಿತಿ ಇತ್ತು. ಕರ್ನಾಟಕ ಸರ್ಕಾರ ಈಗ ಜಾರಿಗೆ ತಂದಿರುವ ಕಾವೇರಿ-2 ಆಧುನಿಕ ತಂತ್ರಜ್ಞಾನವು ಕೇವಲ ಅರ್ಧ ಗಂಟೆಯಲ್ಲಿ ತಮ್ಮ ಆಸ್ತಿ ಮಾರಾಟ ಹಾಗೂ ಖರೀದಿ ಕ್ರೀಯೆಗಳನ್ನು ಮಾಡಿ ಮುಗಿಸಬಹುದಾಗಿದೆ. ಆನ್ ಲೈನ್ ಮೂಲಕ ತಮ್ಮ ಭೂ ಧಾಖಲೆಗಳನ್ನು ಅಪ್ ಲೋಡ್ ನೋಂದಾವಣೆ ಮಾಡಿ ನಿಗಂದಿತ ಶುಲ್ಕ ಭರಿಸಿ ಖರೀದಿಗೆ ದಿನಾಂಕ ಗೊತ್ತುಪಡಿಸಿ ಆ ದಿನಾಂಕದಂದು ಗೊತ್ತು ಪಡಿಸಿದ ವೇಳೆಯಲ್ಲಿ ಜಮೀನು ಮಾರಾಟ ಅಥವಾ ಖರೀದಿ ಮಾಡಿಕೊಡುವ ಕಾರ್ಯವನ್ನು ನೋಂದಾವಣಾಧಿಕಾರಿಗಳು ಮಾಡುತ್ತಾರೆ. ಇದರಿಂದ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಅಲ್ಲದೆ ಸಾರ್ವಜನಿಕರ ಅಲೆದಾಟ, ಸಮಯ ಮತ್ತು ಹಣವು ಉಳಿತಾಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ತಹಸೀಲ್ದಾರ ಕೆ.ಆನಂದ ಶೀಲ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಸುಗಂಧಿ ಮತ್ತು ಲಕ್ಷ್ಮೇಶ್ವರ ಸಬ್ ರಜಿಸ್ಟಾರ್ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.