ನೂತನ ಜಿಲ್ಲೆ ರಚನೆ ಪ್ರಯುಕ್ತ ಹನಸಿಯಲ್ಲಿ ರಂಗೋಲಿ ಸ್ಪರ್ಧೆ.

ಕೂಡ್ಲಿಗಿ.ಅ. 5 :- ನೂತನ ವಿಜಯನಗರ ಜಿಲ್ಲೆ ಉದಯಿಸಿದ ಪ್ರಯುಕ್ತ ಹನಸಿ ಗ್ರಾಮಪಂಚಾಯಿತಿ ವತಿಯಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ವಿಜೇತರಾದ ನಾಲ್ವರು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಮಾನವ ಹಕ್ಕುಗಳ ಹಿತಾರಕ್ಷಣಾ ಸಮಿತಿ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಾ.ಸಿ.ಅಂಜಿನಪ್ಪ ಮಾತನಾಡಿ  ಹನಸಿಯಲ್ಲಿ ನಡೆದ ರಂಗೂಲಿ ಸ್ಪರ್ಧೆಯಲ್ಲಿ ಕಾರ್ಯಕ್ರಮದಲ್ಲಿ ಮಹಿಳೆಯರು ಮನರಂಜನೆಯ ಕಾರ್ಯ ಚಟುವಟಿಕೆಗಳು ಅಲ್ಲದೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಇಂತಹ ಹತ್ತು ಹಲವಾರು ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸುವುದರಿಂದ ಮಹಿಳೆಯರ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಲ್ಲರು ಮಹಿಳೆಯರ ಹಕ್ಕುಗಳ ಬಗ್ಗೆ ಕಾನೂನು ಅರಿವುಗಳ ಮಾಹಿತಿಯನ್ನು ಪಡೆಯುವ  ಮೂಲಕ ಇಂದಿನ ಸಮಾಜದಲ್ಲಿ ಮಹಿಳೆಯರು ಸಾಕ್ಷರತೆ, ಸಾಮಾಜಿಕವಾಗಿ ತಮ್ಮ ತಮ್ಮ ಸ್ವಾಭಿಮಾನಗಳಾಗಿ ಸ್ವಉದ್ಯೋಗದಿಂದ ಮಹಿಳಾ ಸಭಲೀಕರಣ, ಸರ್ಕಾರದ ಹಲವಾರು ಸೌಲಭ್ಯಗಳನ್ನು ಪಡೆದು  ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನ ನಡೆಸಬೇಕು  ಮತ್ತು ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತಮ್ಮ  ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ  ಪ್ರಮುಖ ಪಾತ್ರವನ್ನು ವಹಿಸುವಂತೆ ಅಂಜಿನಪ್ಪ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನಸಿ ಗ್ರಾಮಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಯು ಸಿದ್ದೇಶ್ವರ ವಹಿಸಿದ್ದರು. ಪ್ರೌಢಶಾಲೆಯ ಶಿಕ್ಷಕರಾದ ಮರಳುಸಿದ್ದನಗೌಡ, ಶಾರದಮ್ಮ, ಗ್ರಾಮಪಂಚಾಯಿತಿ ಸದಸ್ಯರಾದ ಸಿ.ದುರುಗಮ್ಮ ಹಾಗೂ ವೀರೇಶ್ ಪಿಡಿಓ ಪರಸಪ್ಪ  ಹಾಗೂ ಗ್ರಾಮದ ಮುಖಂಡರು ಇತರರು ಉಪಸ್ಥಿತರಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವೀಣಾ, ಸಿಂಬುಜಾ, ಲಲಿತಮ್ಮ ಇವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಿದ್ದು ಸಿ ಎಂ ನವೀನಾ ಇವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.