ನೂತನ ಗ್ರೇಡ್-1 ತಹಶೀಲ್ದಾರ ಮಧುರಾಜ ಕೂಡಲಗಿ ಅಧಿಕಾರ ಸ್ವಿಕಾರ

ಕಲಬುರಗಿ:ಜ.12: ತಹಶಿಲ್ದಾರರ ಹುದ್ದೆಯಿಂದ ಸಹಾಯಕ ಆಯುಕ್ತರ ಹುದ್ದೆಗೆ ಪದೋನ್ನತಿ ಹೊಂದಿದ ಪ್ರಕಾಶ ಕುದರಿ ಹಾಗೂ ಇತ್ತಿಚೆಗೆ ಶಹಾಪುರ ತಾಲೂಕಿನಿಂದ ವರ್ಗಾವಣೆಗೊಂಡು ಬುಧವಾರ ಕಲಬುರಗಿ ತಾಲುಕು ದಂಡಾಧಿಕಾರಿ ಹಾಗೂ ಗ್ರೇಡ್-1 ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡ ಮಧುರಾಜ ಕೂಡಲಗಿ ಯಾಳಗಿ ಅವರಿಗೆ ತಹಶಿಲ್ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭದಲ್ಲಿ ಉಭಯ ಅಧಿಕಾರಿಗಳಿಗೆ ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ ಹಾಗೂ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಶಿವರಾಜ ಬಿರಬಿಟ್ಟೆ, ಶಿವಕಾಂತ ಚಿಮ್ಮಾ, ವಿರೇಶ ಬೋಳಶೆಟ್ಟಿ, ಹೆಚ್.ಬಿ ಪಾಟೀಲ್, ಎಂ.ಬಿ ನಿಂಗಪ್ಪ, ಸುನೀಲಕುಮಾರ ವಂಟಿ, ಬಸವರಾಜ ಹೆಳವರ ಯಾಳಗಿ, ಸೂರ್ಯಕಾಂತ ಸಾವಳಗಿ, ವಿಠ್ಠಲ್ ಬಾಲಕೃಷ್ಣ ಕುಲಕರ್ಣಿ, ಧರ್ಮರಾಜ ವಡೇಯರ, ಶಂಭುಲಿಂಗ ವಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.