ನೂತನ ಗ್ರಾ.ಪಂ, ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

ಶಹಾಪುರ:ಜ.2:ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ನೂತನ ಸದಸ್ಯರು ಶಾಂತಿ, ಸಹೋದರತೆ, ಸಮಾನ ಮನಸ್ಥಿತಿ ಮತ್ತು ಸಂತೋಷದಿಂದ ಅಭಿವೃದ್ದಿ ಕಾರ್ಯಗಳಲ್ಲಿ ತೋಡಗಿ, ನಿಮ್ಮ ಎದುರಿಗೆ ಪ್ರತಿಸ್ಪರ್ದೆ ಮಾಡಿರುವ ಅವರುಗಳು ನಿಮ್ಮುರಿನ ನಿಮ್ಮ ಬಾಂದವರಾಗಿರುವುದರಿಂದ ಅನ್ಯತಾಭಾವನೆ ತೋರದೆ ಸ್ನೇಹಿತರಂತೆ ಜನಪರ ಕಾರ್ಯಗಳಲ್ಲಿ ತೋಡಗಿ ಎಂದು ಚುನಾವಣಾ ಅಧಿಕಾರಿಯಾದ ಸೋಮಶೇಕರ ಕರೆ ನೀಡಿದರು.

ತಾಲೂಕಿನ ಹೋತಪೇಠ ಗ್ರಾಮ ಪಂಚಾಯತಿಯಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಚುನಾವಣಾ ಆಯೋಗದಿಂದ ನೀಡುವ ಪ್ರಮಾಣ ಪತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಯಮನೂರಪ್ಪ ಮಾತನಾಡಿ, ಪಂಚಾಯತ ಎಂಬುದು ಒಂದು ಕುಟುಂಬವಿದ್ದಂತೆ ಎಲ್ಲ ಸಿಬ್ಬಂದಿ ಮತ್ತು 28 ಸದಸ್ಯರು ತಮ್ಮ ವಾರ್ಡ ಮತ್ತು ಗ್ರಾಮದಲ್ಲಿ ಉನ್ನತ ಮಟ್ಟದ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಮಾದರಿ ಪಂಚಾಯತಯಾಗಿ ಮಾಡೋಣ ಎಂದು ಅವರು ನುಡಿದರು.

ಇದೆ ಸಂಧರ್ಭದಲ್ಲಿ ನೂತನ 28 ಸದಸ್ಯರು ಹೋತಪೇಠ, ದಿಗ್ಗಿ, ಮಕ್ತಾಪುರ, ಇಂಗಳಗಿ, ಮಡ್ನಾಳ ಗ್ರಾಮದ ಮುಖಂಡರು ಸೇರಿದಂತೆ ಇತರರು ಇದ್ದರು.