ನೂತನ ಗ್ರಾ.ಪಂ ಸದಸ್ಯರಿಂದ ಈಶ್ವರ್ ಖಂಡ್ರೆಗೆ ಸನ್ಮಾನ

ಬೀದರ:ಜ.1: ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ ಕಾಂಗ್ರೆಸ್ ಬೆಂಬಲಿತ 12 ಗ್ರಾಮ ಪಂಚಾಯತ್ ಸದಸ್ಯರು ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಅವರಿಗೆ ಸನ್ಮಾನಿಸಿ ಅವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಈಶ್ವರ ಖಂಡ್ರೆಯವರು ಎಲ್ಲಾ ಯುವಕರು ಒಗ್ಗೂಡಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ನಾಗಶೆಟ್ಟಿ ಶಿವಶಟ್ಟೆ, ಗ್ರಾಪಂ. ಸದಸ್ಯರಾದ ರಿತೇಷ ಬಿರನಳ್ಳೆ, ಮಹಾದೇವ ಬಿರಾದಾರ, ಸಂಜೀವ ಸಿರ್ಸೆ, ಶಿವಾನಂದ ಮಡಿವಾಳ, ಶಿವಕುಮಾರ, ವೆಂಕಟ ವಡೆಯರ, ಹುಲೆಪ್ಪಾ, ಶಿವರಾಜ ಮತ್ತು ಇನ್ನಿತರರು ಉಪಸ್ಥಿತರಿದ್ದರು.