ನೂತನ ಗ್ರಾ.ಪಂ. : ಶಾಸಕರ ಭೇಟಿ

ರಾಯಚೂರು.ಡಿ.೩೧- ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಜಯಗಳಿಸಿದ ಅಭ್ಯರ್ಥಿಗಳು ಶಾಸಕ ಬಸವನಗೌಡ ದದ್ದಲ ಅವರ ಕಛೇರಿಯಲ್ಲಿ ಮಾಲಾರ್ಪಣೆ ಮಾಡಿ, ಸನ್ಮಾನಿಸಿದರು.
ನಿನ್ನೆ ನಡೆದ ಮತ ಎಣಿಕೆಯ ನಂತರ ಮಲ್ಲಾಪೂರು, ಬೂರ್ದಿಪಾಡು, ಅನ್ವರ್, ಹೀರಾಪೂರು, ಮರ್ಚೆಟ್ಹಾಳ, ಆಶಾಪೂರು, ರಘುನಾಥನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿದ ನೂತನ ಸದಸ್ಯರು ಶಾಸಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ನೂತನ ಸದಸ್ಯರಿಗೆ ಪಂಚಾಯತ ಅಧಿಕಾರ ಜವಾಬ್ದಾರಿ ಮೂಲಕ ಸ್ಥಳೀಯವಾಗಿ ಸಮಸ್ಯೆಗಳಿಗೆ ಸ್ಪಂದಿಸಿ, ಹೆಚ್ಚಿನ ಅಭಿವೃದ್ಧಿ ಕೈಗೊಳ್ಳುವಂತೆ ಸೂಚಿಸಿದರು.