ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ

ಸಿರುಗುಪ್ಪ ಜ 11 : ನಗರದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಸನ್ಮಾನ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ, ಬಿ.ಎಂ.ನಾಗರಾಜ, 2018ರ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಮುರುಳಿಕೃಷ್ಣ, ವಕೀಲ ಮಲ್ಲಿಕಾರ್ಜುನ ಸ್ವಾಮಿ, ಹೆಚ್.ಎಂ.ಮಲ್ಲಿಕಾರ್ಜುನ, ಬಿ.ಎಂ‌.ಸತೀಶ್, ರಾಮಸ್ವಾಮಿ ಸಾಹುಕಾರ, ಟಿ.ಸಿದ್ದರಾಮಯ್ಯಸ್ವಾಮಿ, ನರಸಿಂಹ ನಾಯಕ, ಶಿವಶಂಕರ ಗೌಡ, ಗೋಪಾಲರೆಡ್ಡಿ, ಕರಿಬಸಪ್ಪ ಇದ್ದರು.