ನೂತನ ಗ್ರಾಪಂ ಸದಸ್ಯೆ ರಾಧಾರಿಗೆ ಅಭಿನಂದನೆ

ಮಾಲೂರು.ಜ೫- ತಾಲೂಕಿನ ಲಕ್ಕೂರು ಹೋಬಳಿಯ ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಬಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಕುಮಾರಿ ರಾಧ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಇವರನ್ನು ಶಾಸಕ ಕೆ ವೈ ನಂಜೇಗೌಡ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ ವೈ ನಂಜೇಗೌಡ ಮಾತನಾಡಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನಲ್ಲಿ ಜನತೆ ನನ್ನ ಅಭಿವೃದ್ಧಿ ಕೆಲಸಗಳು ಗಮನಿಸಿ ಈ ಬಾರಿ ಯುವತಿ ಯುವಕರನ್ನು ಹೆಚ್ಚು ಗ್ರಾ.ಪಂ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ ಗ್ರಾಮದ ಅಭಿವೃದ್ಧಿಗೆ ಯುವಜನತೆ ಮುಂದೆ ಬರಬೇಕು ಇದು ಒಳ್ಳೆಯ ಬೆಳವಣಿಗೆ ಎಂದು ಅಭಿವೃದ್ಧಿಗೆ ನನ್ನ ಸಹಕಾರ ಇದೆ ಎಂದರು. ಮುಖಂಡರಾದ ರಾಮಚಂದ್ರಪ್ಪ, ಶ್ರೀನಿವಾಸ್, ಚಂದ್ರಪ್ಪ ಇತರರು ಹಾಜರಿದ್ದರು.