ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ

ಚಿಕ್ಕಬಳ್ಳಾಪುರ.ಜ, ೫.ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಾಲಯದಲ್ಲಿ ಗುಡಿಬಂಡೆ ಮಂಡಲದ ನೂತನ ಗ್ರಾ.ಪಂಚಾಯತಿ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗುಡಿಬಂಡೆ ಮಂಡಲದಲ್ಲಿ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ ನವರು ನೂತನ ಬಿಜೆಪಿ ಸದಸ್ಯರಿಗೆ ಶಲ್ಯಾ ಹಾಕಿ ಪಕ್ಷಕ್ಕೆ ತುಂಬು ಹೃದಯದಿಂದ ಸ್ವಾಗತಿಸಿ ಅಭಿನಂದನೆಗಳು ಸಲ್ಲಿಸಿದರು .
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮರಳಕುಂಟೆ ಕೃಷ್ಣ ಮೂರ್ತಿ, ಜಿಲ್ಲಾ ಓ.ಬಿ.ಸಿ.ಜಿಲ್ಲಾಧ್ಯಕ್ಷರಾದ ಅಪ್ಪಾಲು ಮಂಜುನಾಥ್,ಗುಡಿಬಂಡೆ ಮಂಡಲ ಅಧ್ಯಕ್ಷರಾದ ಗಂಗರೆಡ್ಡಿ,ಪ್ರಧಾನ ಕಾರ್ಯದರ್ಶಿ ಮದನ್ ಮೋಹನ್ ರೆಡ್ಡಿ, ಮಾಜಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಮಣ್ಣ,ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮಿಪತಿ, ಜಿಲ್ಲಾ ಕಾರ್ಯದರ್ಶಿ ಆಶೋಕ್, ಶಿಕ್ಷಕರ ಪ್ರಕೋಷ್ಠ ರಾಜ್ಯ ಸದಸ್ಯರಾದ ನರಸಪ್ಪ,ಓ.ಬಿ.ಸಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್ ಕನಕ ಶ್ರೀ, ಓ.ಬಿ.ಸಿ.ಮೋರ್ಚಾ ಜಿಲ್ಲಾ ಕಾರ್ಯದರ್ಶಿ SಖS ದೇವರಾಜ್,ಜಿಲ್ಲಾ ಮಾಧ್ಯಮ ಪ್ರಮುಖ್ ವಿ.ಮಧುಚಂದ್ರ,ಗುಡಿಬಂಡೆ ಮಂಡಲ ಮಾಜಿ ಅಧ್ಯಕ್ಷರಾದ ನಾಗಭೂಷಣ್ ರೆಡ್ಡಿ, ರಾಜೇಶ್ ಜೈನ್,ಮನೋಜ್,ಗುಡಿಬಂಡೆ ಸೋಶಿಯಲ್ ಮೀಡಿಯಾ ಮಧುರಾಮ್ ಮೂರ್ತಿ, ಕಾರ್ಯದರ್ಶಿ ಶ್ರೀನಿವಾಸ್,ಹಾಗೂ ಗುಡಿಬಂಡೆ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.