ನೂತನ ಗೆಸ್ಟ್ ಹೌಸ್

ಬಳ್ಳಾರಿ ನ 18 : ನಗರದಲ್ಲಿ ಈಗಾಗಲೇ ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಿಸಿರುವ ಗೆಸ್ಟ್ ಹೌಸ್ ಇದ್ದು. ಅದರ ಸಮೀಪವೇ ಸರ್ಕಾರ 5 ಕೋಟಿ ರೂ ವೆಚ್ಚದಲ್ಲಿ 15 ಕೋಣೆಗಳಿರುವ ನೂತನ ಗೆಸ್ಟ್ ಹೌಸ್ ನಿರ್ಮಾಣ ಮಾಡಿದೆ. ನೆಲ, ಹಾಗು ಮೊದಲ ಹಂತಸ್ತಿನ ಈ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ದಗೊಂಡಿದೆ. ಗೆಸ್ಟ್ ಹೌಸ್ ಗಳಿದ್ದರೂ ಅನೇಕ ಸಚಿವರು ಖಾಸಗಿ ಹೊಟೇಲ್ ಗಳಲ್ಲಿ ಉಳಿದುಕೊಳ್ಳುವುದು ಮಾತ್ರ ತಪ್ಪುತ್ತಿಲ್ಲ.