ನೂತನ ಕೊಳವೆ ಬಾವಿಗೆ ಚಾಲನೆ

ಕೋಲಾರ,ಮಾ.೧೬:ಕೇಂದ್ರ ಸರ್ಕಾರದ ಅನುದಾನದಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಹೊಸ ಬೋರ್‍ವೆಲ್‌ಗೆ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಬಾಬು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾಗೇಶ್, ಸದಸ್ಯರಾದ ಪಟೇಲ್ ಶ್ರೀನಿವಾಸ ಯಾದವ್ ರವರು ಖಾದ್ರಿಪುರದ ಗೋವಿಂದ, ಶ್ರೀಕಾಂತ್, ಸಂಗೊಂಡಹಳ್ಳಿ ಕುಮಾರ್, ಕುಪ್ಪಹಳ್ಳಿ ಗ್ರಾಮದ ನಾರಾಯಣಪ್ಪ ಉಪಸ್ಥಿತರಿದ್ದರು.ಇದಕ್ಕೂ ಮುನ್ನಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಜಯನಗರ ಗ್ರಾಮದಲ್ಲಿ ರಂಗೋಲಿ ಏರ್ಪಡಿಸಲಾಗಿತ್ತು. ವಿಜೇತರಿಗೆ ಬೆಳ್ಳಿ ಕುಂಕುಮ ಬಟ್ಟಲುಗಳನ್ನು ನೀಡಿ ಸನ್ಮಾನಿಸಲಾಯಿತು.
ಸುಪ್ರಿಯಾ ಪ್ರಥಮ ಬಹುಮಾನ ಪಡೆದಿದ್ದು, ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.