ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.21: ಸಹಕಾರ ಸಂಘದ ಕಟ್ಟಡಗಳು ಆ ಗ್ರಾಮದ ಘನತೆಯ ಪ್ರತೀಕಗಳಾಗಿದ್ದು ಗ್ರಾಮಸ್ಥರ ಶ್ರೇಯೋಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶಾಸಕ ಹಾಗೂ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಚಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಜಲಸೂರು ಬೆಂಗಳೂರು ರಸ್ತೆ ಅಗಲೀಕರಣದ ವೇಳೆ ನೆಲಸಮಗೊಂಡ ಹಿನ್ನೆಲೆಯಲ್ಲಿ ಕೆ.ಶಿಪ್ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡುತ್ತಿದ್ದು. ಗ್ರಾಮದ ಮುಖಂಡರುಗಳು, ಸಂಘದ ಸದಸ್ಯರು ಕಟ್ಟಡ ನಿರ್ಮಾಣ ಮಾಡುವಾಗ ಗುಣಮಟ್ಟದ ಕಾಮಗಾರಿಯತ್ತ ಗಮನ ನೀಡಬೇಕು.ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಿ ಡೈರಿ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಎಂದರು.
ಮನ್ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ ಸಹಕಾರ ಸಂಘದ ಕಾರ್ಯನಿರ್ವಹಣೆಗಾಗಿ ಸ್ವಂತ ಕಟ್ಟಡ ಹೊಂದುವುದು ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ನೂತನ ಕಟ್ಟಡ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು,
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಕಾವ್ಯಜಗದೀಶ್ ಹಾಗೂ ಮಾಚಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಕವಿತಾರಂಗೇಗೌಡ, ರಾಣಿಸೋಮಶೇಖರ, ರತ್ನಮ್ಮನಾಗಣ್ಣ, ಎಂ,ಕೆ.ಪ್ರಸನ್ನಕುಮಾರ್. ಎಂ.ಎಸ್.ಹರೀಶ, ಎಂ.ಜಿ.ಗೋಪಾಲ್. ಮಹದೇವ. ತಮ್ಮಣ್ಣೇಗೌಡ. ಗ್ರಾಪಂ ಮಾಜಿ ಸದಸ್ಯ ಹಾಗು ನಿರ್ದೇಶಕ ಎಂ.ಎಸ್.ಪ್ರಸನ್ನ ಸಂಘದ ಕಾರ್ಯದರ್ಶಿ ಎಂ.ಪಿ.ರಮೇಶ್, ಸಹಾಯಕ ಬಸವರಾಜ್, ರಂಗನಾಥ್ ಗ್ರಾಮದ ಮುಖಂಡರಾದ ಪದ್ಮನಾಭ, ಹರೀಶ, ಸತೀಶ, ಯಾಲಕ್ಕಿಗೌಡ, ರಾಜೇಗೌಡ, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.