ನೂತನ ಕಛೇರಿಗಳಿಗೆ ಸೂಕ್ತ ರಸ್ತೆ ನಿರ್ಮಿಸುವಂತೆ ಆಗ್ರಹ

ಕೆಂಭಾವಿ: ಜೂ.8:ಪಟ್ಟಣದಲ್ಲಿ ಇತ್ತಿಚಿಗೆ ಹೊಸದಾಗಿ ಉದ್ಘಾಟನೆಯಾಗಿರುವ ನಾಡ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ತೆರಳುವ ಮಾರ್ಗಗಳು ಸಂಪೂರ್ಣ ಹದಗೆಟ್ಟಿದ್ದು ಇದರಿಂದ ದಿನಂಪ್ರತಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ .ಸುಮಾರುನಾಲ್ಕೈದು ದಿನಗಳಿಂದ ಸುರಿಯುತ್ತಿರು ಮಳೆಗೆ ಕಚೇರಿಗೆ ಬರುವ ವೃದ್ದರು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಿಕ್ಕು ಪರದಾಡುವಂತಾಗಿದೆ .ಕೂಡಲೇ ಅಧಿಕಾರಿಗಳು ಸೂಕ್ತ ಗಮನವಹಿಸಿ ರಸ್ತೆಗಳನ್ನು ಸುಧಾರಿಸಬೇಕು ಮತ್ತು ಅಲ್ಲಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸ ಕೊಡಬೇಕು ಎಂದು ದಲಿತ ಮುಖಂಡ ಮರೆಪ್ಪ ಕಟ್ಟಿಮನಿ ಆಗ್ರಹಿಸಿದ್ದಾರೆ.