ನೂತನ ಎಎಸ್‍ಪಿ ಆಗಿ ಕೆ.ಎಸ್. ಸುಂದರ್‍ರಾಜ್ ಅಧಿಕಾರ ಸ್ವೀಕಾರ

ಚಾಮರಾಜನಗರ, ಜೂ.03- ನೂತನ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಕೆ.ಎಸ್. ಸುಂದರ್‍ರಾಜ್ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಚಾಮರಾಜನಗರಕ್ಕೆ ಆಗಮಿಸಿದ ಕೆ.ಎಸ್. ಸುಂದರ್‍ರಾಜ್ ರವರು ಬುಧವಾರ ಸಂಜೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ರವರನ್ನು ಭೇಟಿ ಮಾಡಿ ನಂತರ ಅಧಿಕಾರ ಸ್ವೀಕರಿಸಿದರು. ಹಾಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಹದ್ದಣ್ಣನವರ್ ರವರಿಗೆ ಯಾವುದೇ ಸ್ಥಳ ತೋರಿಸದೆ, ಕೇಂದ್ರ ಕಛೇರಿಯಲ್ಲೇ ಕಾರ್ಯನಿರ್ವಹಿಸುವಂತೆ ಸರ್ಕಾರ ತಿಳಿಸಿದೆ ಎಂದು ತಿಳಿದು ಬಂದಿದೆ.