ನೂತನ ಆಯುಕ್ತರಾಗಿ ರಾಜಣ್ಣ ಅಧಿಕಾರ ಸ್ವೀಕಾರ

ನಂಜನಗೂಡು:ಏ:12: ನಗರಸಭೆಯ ನೂತನ ಆಯುಕ್ತರಾಗಿ ರಾಜಣ್ಣ ಅಧಿಕಾರ ಸ್ವೀಕಾರ.
ಅಧಿಕಾರ ಸ್ವೀಕಾರದ ನಂತರ ಪತ್ರಕರ್ತರ ಜೊತೆ ಮಾತನಾಡಿ, ನನ್ನ ಅವಧಿಯಲ್ಲಿ ಯಾವುದೇ ಕಡತ ವಿಲೇ ಮಾಡುವುದಿಲ್ಲ ಆ ದಿನದ ಕೆಲಸಗಳನ್ನು ಆ ದಿನವೇ ಮುಗಿಸಿ ಸಾರ್ವಜನಿಕರಿಗೆ ನೀಡಲು ಸಹಕರಿಸುತ್ತೇನೆ. ಮನೆಯಿಂದ ನಾನು ಕಚೇರಿಗೆ ಬರುವಾಗ ತರುವುದು ಒಂದು ಪೆನ್ನು ಮಾತ್ರ. ನನ್ನ ಕಚೇರಿಯಲ್ಲಿ ಯಾವುದೇ ಬೀರುಗಳು ಇಡಬಾರದು ಅದರ ಅವಶ್ಯಕತೆ ನನಗಿಲ್ಲ. ಅವತ್ತಿನ ಕಡತಗಳನ್ನು ಅಧಿಕಾರಿಗಳು ಆ ದಿನವೇ ತಂದು ಕಡತಗಳಿಗೆ ಸಹಿ ಮಾಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು. ಖಾತೆ ಬದಲಾವಣೆ ಟ್ರೇಡ್ ಲೈಸೆನ್ಸ್ ಮತ್ತು ಜನನ ಮರಣ ಪತ್ರ ಈ ರೀತಿ ಪ್ರತಿಯೊಂದು ಕೆಲಸಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ನೀಡಬೇಕು.
ಈ ರೀತಿ ಅಧಿಕಾರಿಗಳಿಗೆ ಒಂದು ಸಭೆ ಕರೆದು ಸೂಚನೆ ನೀಡುತ್ತೇನೆ ನನ್ನ ಹತ್ತಿರ ಯಾವುದೇ ಫೈಲ್ ಗಳು ಇಡಬಾರದು ಅವತ್ತಿನ ದಿನವೇ ತಂದು ಸಹಿ ಮಾಡಿಸಿಕೊಳ್ಳಬೇಕು ಸಾರ್ವಜನಿಕರಿಗೆ ತೊಂದರೆ ನೀಡಬಾರದೆಂದು ತಿಳಿಸುತ್ತೇನೆ ಎಂದರು.