ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜ.24:- ಮೇಲೂರು ಗ್ರಾಮದ ಹಾಲು ಉತ್ಪಾದಕರ ಸಹ ಕಾರ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಶಿವರಾಮೇಗೌಡ ಚುನಾವಣೆಯಲ್ಲಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಕರಾದ ರಮೇಶ್, ಶಿವರಾಮೇಗೌಡ, ಅಶ್ವತ್, ಚಂದ್ರಪ್ಪ, ಪುರುಷೋತ್ತಮ, ಎಂ.ಎಸ್.ಕುಮಾರ್, ರವಿ, ನಿಂಗರಾಜುಗೌಡ, ರಾಜೇಶ್ವರಿ, ಮಂಜುಳ, ಎಂ.ಎನ್.ಹರೀಶ್ ಚುನಾವಣೆಯಲ್ಲಿ ಹಾಜರಿದ್ದರು.
ಚುನಾವಣಾಧಿಕಾರಿ ಶಿಲ್ಪಶ್ರೀ ರವರ ಸಮ್ಮುಖದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಮತ್ತು ರವಿ ಇಬ್ಬರು ನಾಮ ಪತ್ರಸಲ್ಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಮೇ ಗೌಡ ಮತ್ತು ನಿಂಗರಾಜುಗೌಡ ನಾಮ ಪತ್ರವನ್ನು ಸಲ್ಲಿಸಿದ್ದು ಎರಡು ಗುಂಪು ಗಳ ನಡುವೆ ಬಾರಿ ಜಿದ್ದ-ಜಿದ್ದಿ ಯಿಂದ ಚುನಾವಣೆ ನಡೆಯಿತು.
ಮತ ಏಣಿಕೆಯಲ್ಲಿ ರಮೇಶ್ 07 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ ರವಿ 04 ಮತಗಳನ್ನು ಪಡೆದು ಪರಭವ ಗೊಂಡರು. ಶಿವರಾಮೇಗೌಡ 08 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ ನಿಂಗ ರಾಜುಗೌಡ 03 ಮತ ಪಡೆದು ಸೋಲುಂಡರು.
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್ ನೂತನ ವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತ ನಾಡಿದ ಅವರು ಸಂಘದಲ್ಲಿ ಯಾವು ದೇ ಪಕ್ಷ-ಭೇದ ಮಾಡದೆ ಹಾಲು ಉತ್ಪಾದನೆಯನ್ನು ಹೆಚ್ಚು ಮಾಡುವ ಮೂಲಕ ತಾಲ್ಲೂಕಿನಲ್ಲಿ ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘ ವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಿ ಲಾಭಂಶವನ್ನ ಶೇರುದಾರರಿಗೆ ನೀಡುವ ಮೂಲಕ ಎಲ್ಲಾರನ್ನು ವಿಶ್ವಸಕ್ಕೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ನರೇಂದ್ರ ಕುಮಾರ್, ಸಾ.ರಾ.ಯುವ ಸೇನೆ ರಾಜ್ಯಾಧ್ಯಕ್ಷ ಮೇಲೂರು ಗೌತಮ್, ಶಂಭುಗೌಡ, ನಾಗರಾಜೇಗೌಡ, ಪುನೀತ್, ಲೋಕೇಶ್, ಪೆÇಲೀಸ್ ಸಿಬ್ಬಂದಿಗಳಾದ ಮಧುಕುಮಾರ್, ಮನು ಸೇರಿದಂತೆ ಇನ್ನಿತರರು ಹಾಜರಿದ್ದರು.