ನೂತನ ಅದ್ಯಕ್ಷ ಉಪಾದ್ಯಕ್ಷರಿಗೆ ಪೌರಸೇವಾ ಸಂಘದಿಂದ ಸನ್ಮಾನ. ಕಾರ್ಮಿಕರ ಸಹ

ಇರಲಿ – ಕೆ.ಮುನಿಸ್ವಾಮಿ. ಸಿರವಾರ.ನ.6- – ಪಟ್ಟಣದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬಿದಿ ದೀಪ ನಿರ್ವಹಣೆ ಉತ್ತಮ ರೀತಿಯಲ್ಲಿ ಮಾಡುವ ಮೂಲಕ ನೂತನ ಅದ್ಯಕ್ಷ – ಉಪಾದ್ಯಕ್ಷರಿಗೆ ಸಹಕಾರ ನಿಡೋಣ ಎಂದು ಪ.ಪಂಚಾಯತಿ ಕೆ.ಮುನಿಸ್ವಾಮಿ ಹೇಳಿದರು. ಪಟ್ಟಣ ಪಂಚಾಯತಿಗೆ ನೂತನವಾಗಿ ಅದ್ಯಕ್ಷರಾಗಿರುವ ಲತಾ ಗುರುನಾಥ ರೇಡ್ಡಿ ಹಾಗೂ ಉಪಾದ್ಯಕ್ಷರಾದ ಚನ್ನಬಸವ ಗಡ್ಲ ಅವರಿಗೆ ಇಂದು ಬೆಳಗ್ಗೆ ಪೌರ ಕಾರ್ಮಿಕರ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಪೌರ ಕಾರ್ಮಿಕರ ಶ್ರಮವಹಿಸಿ ಕೆಲಸ ಮಾಡಿದರೆ, ಪಟ್ಟಣ ಸೌಂದರ್ಯವಾಗಿರುತ್ತದೆ. ಕೆಲಸ ಮಾಡುವಾಗ ನಿಮ್ಮ ಅರೋಗ್ಯದ ಕಡೆ ಗಮನ ಇರಲಿ.‌ ನೂತನವಾಗಿ ಆಯ್ಕೆಯಾಗಿರುವ ಅದ್ಯಕ್ಷ- ಉಪಾದ್ಯಕ್ಷರಿಗೂ ನಿಮ್ಮ ಸಹಕಾರ ಇರಲಿ. ನಿಮ್ಮ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಾರೆ ಎಂದರು. ಸಮುದಾಯ ಸಂಘಟನಾದಿಕಾರಿ ಹಾಗೂ ಪೌರ ಕಾರ್ಮಿಕರ ಸಂಘದ ಜಿಲ್ಲಾದ್ಯಕ್ಷ ಹಂಪಯ್ಯ, ಸಿರವಾರ ಘಟಕ ಅದ್ಯಕ್ಷ ಸಚೀನ್ ಚ್ಯಾಗಿ, ಶರಣಬಸವ ಮಾತನಾಡಿದರು. ಈ ಸಂದರ್ಭದಲ್ಲಿ ಸದಸ್ಯರಾದ ಚನ್ನಪ್ಪನಾಗೋಲಿ,ಖಾಸಿಂ ಮೊತಿ, ಮುಖಂಡರಾದ ಗುರುನಾಥ ರೇಡ್ಡಿ, ಸೂರಿ ದುರುಗಣ್ಣ ನಾಯಕ, ಸಿಬ್ಬಂದಿಗಳಾದ ವಿರೇಶ ನೇಕಾರ, ಪದ್ಮಾವತಿ, ಸನಾ, ಚಾಂದಸಾಬ್ ಸೇರಿದಂತೆ ಇನ್ನಿತರರು ಇದ್ದರು.