ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ-ನಾಡಗೌಡ

ಸಿಂಧನೂರು.ಆ.೦೬- ಸಚಿವ ಶಾಸಕ ವೆಂಕಟರಾವ ನಾಡಗೌಡ ಹಂಚಿನಾಳಕ್ಯಾಂಪ (ಶಾಂತಿನಗರ )ದಲ್ಲಿ ನೂತನವಾಗಿ ಕಟ್ಟಲಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು.
ತಾಲ್ಲೂಕಿನ ಹಂಚಿನಾಳಕ್ಯಾಂಪ (ಶಾಂತಿನಗರ)ದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕಟ್ಟಡ ಹಾಳಾಗದಂತೆ ಸ್ವಚ್ಛ ವಾಗಿಟ್ಟು ಕೊಳ್ಳಬೇಕು ಹಾಗು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವ ಮೂಲಕ ಶಿಕ್ಷಣದ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ಜೆಡಿಎಸ್ ಮುಖಂಡರಾದ ನಾಗೇಶ ಹಂಚಿನಾಳ ಕ್ಯಾಂಪ್, ಸುಬ್ಬರಾವ್, ಕೃಷ್ಣಮೂರ್ತಿ, ತುರ್ವಿಹಾಳ ವಲಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ಮೇಲ್ವಿಚಾರಕಿ, ಶೈಲಾ ಶಾಲಿಮಠ, ಗೋರೆಬಾಳ ಗ್ರಾಮ ಪಂಚಾಯಿತಿ ಪಿಡಿಒ ಸಿ.ಎಚ್. ಮುದುಕಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಲಿಂಗಪ್ಪ ಶಿಕ್ಷಕ ರಾದ ಅಂಬೋಜಿ ಪವಾರ, ನಟರಾಜ ಕೊಟ್ರೇಶ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ಕುಮಾರ ಅಂಗನವಾಡಿ ಕಾರ್ಯಕರ್ತೆಯದ ಮಾರುತಮ್ಮ ಸೇರಿದಂತೆ ಇತರರು ಇದ್ದರು.