ನೂತನವಾಗಿ ಅಂಗನವಾಡಿ ಶಾಲೆಗಳ ಆರಂಭ

ಕೆಂಭಾವಿ :ಫೆ.25: ಪಟ್ಟಣದ ವಾರ್ಡ ನಂ 3ರ ಜನತೆಯ ಬಹುದಿನದ ಬೇಡಿಕೆಯಂತೆ ಗುರುವಾರ 2 ಅಂಗನವಾಡಿ ಶಾಲೆಗಳನ್ನು ಆರಂಭಿಸಲಾಯಿತು.

ಪುರಸಭೆಯ ನೂತನ ಸದಸ್ಯ ರವಿಶಂಕರ ಸೋನ್ನದ ಅವರು ರಿಬ್ಬನ್ ಕಟ್ ಮಾಡುವ ಮೂಲಕ ನೂತನ ಅಂಗನವಾಡಿ ಶಾಲೆಗೆ ಚಾಲನೆ ನೀಡಿದರು ನಂತರ ಜೊತಿ ಬೆಳಗಿಸುವುದರೊಂದಿಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣದಲ್ಲೆ ಅತಿಹೆಚ್ಚು ಜನಸಂಖ್ಯೆಯುಳ್ಳ ವಾರ್ಡ ಇದಾಗಿದ್ದು ,ಇಲ್ಲಿನ ಮಕ್ಕಳು ಪ್ರಾಥಮಿಕ ಪೂರ್ವ ಶಿಕ್ಷಣ ಪಡೆಯಲು ಖಾಸಗಿ ಶಾಲೆಗಳತ್ತಾ ಮುಖ ಮಾಡುವುದು ಅನಿವಾರ್ಯವಾಗಿತ್ತು , ಹೀಗಿರುವಾಗ ವಾರ್ಡಿನ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು . ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಶೀಘ್ರವೇ ಎಚ್ಚತ್ತ ಅಧಿಕಾರಿಗಳು ಬಹುದಿನಗಳಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಬಡ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಒಂದರ ಹಿಂದೆ ಒಂದು ಎಂಬಂತೆ ನಮ್ಮ ವಾರ್ಡಿಗೆ 2 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಮಕ್ಕಳ ಕಲಿಕೆಗೆ ಸಹಾಯವಾಗುವಂತೆ ಶಿಕ್ಷಣ ಇಲಾಖೆಯಿಂದ ಕೋಣೆ ನೀಡಿರುವ ಶಿಕ್ಷಣ ಅಧಿಕಾರಿಗಳಿಗು ಮತ್ತು ಕನ್ಯಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗು ವಾರ್ಡಿನ ಎಲ್ಲಾ ನಿವಾಸಿಗಳಿಂದ ಧನ್ಯವಾದಗಳು ಎಂದು ಹೇಳಿದರು. ಸುರೇಖಾ ಜಾಗಿರದಾರ ಸ್ವಾಗತಿಸಿದರು , ವಲಯ ಶಿಕ್ಷಕಿ ಸುನಿತಾ ಪಾಟೀಲ್ ಪ್ರಾಸ್ತವಿಕ ನುಡಿಗಳನ್ನಾಡಿರದರು , ಶಿಕ್ಷಕಿ ಮಾಲನಬಿ ಕಾರ್ಯಕ್ರಮದ ವಂದನಾರ್ಪಣೆಯನ್ನು ನೆರವೇರಿಸಿದರು. ಈ ಸಂಧರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಬದ್ರಮ್ಮ ಎಸ್ ಬ್ಯಾಕೋಡ್ , ರತ್ನ ಕುಲ್ಕರ್ಣಿ , ಇಸ್ರತ್ , ಸಿರೀನ್ ನಾಶಿ , ಕನ್ಯಾ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಮತ್ತು ಮುಖ್ಯ ಶಿಕ್ಷಕರು ಸಿದ್ದನಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.