ನುಮನ್ ಬೇಕರಿ ಮಾಲೀಕ ಸೈಯದ್ ಅಜರ್‍ಗೆ ಸನ್ಮಾನ

ಭಾಲ್ಕಿ:ನ.14: ಇಲ್ಲಿಯ ನುಮನ್ ಬೇಕರಿ ಮಾಲೀಕ ಸೈಯದ್ ಅಜರ್ ತಂದೆ ಸೈಯದ್ ಖಾಲೀದಮಿಯ್ಯ ಅವರನ್ನು ಪೆÇಲೀಸ್ ಇಲಾಖೆ ವತಿಯಿಂದ ಪ್ರಂಶಸನೀಯ ಪತ್ರ ನೀಡಿ ಸನ್ಮಾನಿಸಲಾಗಿದೆ.

ನಗರ ಪೆÇಲೀಸ್ ಠಾಣೆ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಸಿಸಿ ಟಿವಿ ಉದ್ಘಾಟನಾ ಸಮಾರಂಭದಲ್ಲಿ ಪಟ್ಟಣದಲ್ಲಿ ಅಪರಾಧ ಪ್ರಕರಣ ತಡೆಗಟ್ಟಲು ವೈಯಕ್ತಿಕವಾಗಿ ಸಿಸಿ ಕ್ಯಾಮೆರಾ ದೇಣಿಗೆ ನೀಡಿದ ಸೈಯದ್ ಅಜರ್ ಅವರನ್ನು ಶಾಸಕ ಈಶ್ವರ ಖಂಡ್ರೆ ಅವರು ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಡಿವೈಎಸ್ಪಿ ಪೃಥ್ವಿಕ್ ಶಂಕರ್ ಇದ್ದರು.