ನುಡಿ ಜಾತ್ರೆಗೆ ಕೈ ಜೊಡಿಸಲು ವಾಲಿ ಮನವಿ

ಬೀದರ:ಫೆ.25: ಫೆ. 27 ಹಾಗೂ 28 ಫೆಬ್ರವರಿ-2024 ರಂದು ಎರಡು ದಿವಸಗಳ ಕಾಲ ಬೀದರ ರಂಗಮಂದಿರದಲ್ಲಿ ನಡೆಯಲಿರುವ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಭಿತ್ತಿ ಪತ್ರವನ್ನು ಇಂದು ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ, ಹಿರಿಯ ಪತ್ರಕರ್ತರು, ಕನ್ನಡ ರಾಜ್ಯೋತ್ಸವ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕøತರು ಹಾಗೂ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶಿವಶರಣಪ್ಪ ವಾಲಿ ಅವರು ಬಿಡುಗಡೆ ಮಾಡಿದರು.
ಬಿಡುಗಡೆ ಮಾಡಿ ಮಾತನಾಡಿದ ಶಿವಶರಣಪ್ಪ ವಾಲಿಯವರು, ಇಂದು ಬೀದರ ಜಿಲ್ಲೆಯಲ್ಲಿ ಯುವಕರು ಕೂಡಿ ಕನ್ನಡದ ತೇರು ಎಳೆಯುತ್ತಿರುವುದು ಸಂತಸವಾಗಿದೆ. ಜಿಲ್ಲೆಯ ಕನ್ನಡದ ಮನಸ್ಸುಗಳು ಜಾಗೃತರಾಗಿ ಎರಡು ದಿವಸಗಳ ಕಾಲ ನುಡಿ ಜಾತ್ರೆಯಲ್ಲಿ ಭಾಗಿಗಳಾಗಿ ಕನ್ನಡ ಕೈಂಕರ್ಯಕ್ಕೆ ಸಹಕರಿಸಲು ಮನವಿ ಮಾಡಿದರು. ಇಂದು ಇಂಗ್ಲಿಷ್ ವಾತಾವರಣದಲ್ಲಿ ಕನ್ನಡ ಕಲಿಕೆ ಅನಿವಾರ್ಯ, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸುರೇಶ ಚನಶೆಟ್ಟಿ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೇಲಿನ ಮೇಲೆ ಸಮ್ಮೇಳನ ಆಯೋಜಿಸುತ್ತಿರುವುದು ಅತ್ಯಂತ ಸಂತಸವಾಗಿದೆ ಎಂದು ಮನದುಂಬಿ ನುಡಿದರು. ಜಿಲ್ಲೆಯ ಕನ್ನಡ ಪ್ರೇಮಿಗಳಿಗೆ ಮನವಿ ಮಾಡಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕೋರಿದರು.
ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನಶೆಟ್ಟಿ ಮಾತನಾಡಿ, ನಾಡೋಜ ಪ್ರಶಸ್ತಿಗೆ ಭಾಜನರಾದ ಡಾ. ಬಸವಲಿಂಗಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿವಸಗಳ ಕಾಲದ ನುಡಿ ಜಾತ್ರೆಯಲ್ಲಿ ಬೀದರ ಜಿಲ್ಲೆಯ ಕವಿಗಳು, ಲೇಖಕರು, ಸಾಹಿತಿಗಳು, ಕಲಾವಿದರು, ಆಜೀವ ಸದಸ್ಯರು, ಕನ್ನಡದ ಮನಸ್ಸುಗಳು, ಜಿಲ್ಲಾ ರಂಗಂದಿರಕ್ಕೆ ಬಂದು ನುಡಿ ಜಾತ್ರೆಯಲ್ಲಿ ಭಾಗಿಗಳಾಗಲು ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿಗಳಾದ ಪ್ರೊ. ಶಿವಕುಮಾರ ಕಟ್ಟೆ, ಟಿ. ಎಂ. ಮಚ್ಛೆ ಕೋಶಧ್ಯಕ್ಷರಾದ ಶಿವಶÀಂಕರ ಟೋಕರೆ, ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ. ಎಸ್. ಮನೋಹರ, ಉಪಧ್ಯಕ್ಷರಾದ ಬಾಬುರಾವ ದಾನಿ, ನಿಕಟಪೂರ್ವ ಕಸಾಪ ಕಾರ್ಯದರ್ಶಿಗಳಾದ ನಾಗಶೆಟ್ಟಿ ಧರಮಪುರ, ದೀಪಕ ವಾಲಿ, ವಿವೇಕ ವಾಲಿ, ಹಾಗೂ ಲಂಡನ್ ಪ್ರತಿನಿಧಿ ಆದೀಶ ವಾಲಿ ಪಾಲ್ಗೊಂಡಿದರು.