ನುಡಿದಂತೆ ನಡೆಯುವ ಪಕ್ಷ ಕಾಂಗ್ರೇಸ್:ಶಾಸಕ ನಾಡಗೌಡ

ತಾಳಿಕೋಟೆ:ಜೂ.12: ಜನರಿಂದ ಜನರಿಗೋಸ್ಕರ ಜನಪರವಾಗಿ ಮಾಡುವ ಕೆಲಸಗಳು ಸರ್ಕಾರ ಮಾಡಬೇಕು ನಾವು ಕೊಟ್ಟ ಮಾತು ಜಾರಿಗೆ ತರುವ ಕೋಸ್ಕರ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ಪ್ರೀಯಾಂಕಾ ಗಾಂಧಿ, ರಾಹುಲ್ ಗಾಂದಿ ಅಲ್ಲದೇ ಚುನಾವಣಾ ಅಭ್ಯರ್ಥಿಗಳು ಹೇಳಿದಂತೆ ಜೂಲೈ ಅಂತ್ಯದಲ್ಲಿ ಎಲ್ಲ ಯೋಜನೆಗಳು ಜಾರಿಗೆ ಬರಲಿವೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.

ರವಿವಾರರಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ವಿಜಯಪೂರ ವಿಭಾಗದ ವತಿಯಿಂದ ತಾಳಿಕೋಟೆ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ ಸಾಮಾನ್ಯ ಹಾಗೂ ವೇಗದೂರ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆಯಾದ ಶಕ್ತಿಯೋಜನೆಗೆ ಬಸ್ಸಿಗೆ ಹಸಿರು ನಿಶಾನ್ಯೆ ತೋರಿಸಿ ನಂತರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣಕ್ಕೆ ಟಿಕ್‍ಟ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಡಿಗ್ರಿ ಯುವಕರಿಗೆ ನಿರೂಧ್ಯೋಗ ಸಮಸ್ಯೆಗಾಗಿ ಹಾಗೂ ರೈತರಿಗಾಗಿ ಕಾರ್ಮಿಕರಿಗೆ ಕೊಡುವ ಯಾವ ಯೋಜನೆಗಳು ನಿಲ್ಲುವಿಲ್ಲಾವೆಂಬುದು ಜನತೆ ತಿಳಿದುಕೊಳ್ಳಬೇಕೆಂದರು. ವಿರೋಧಿಗಳ ಮಾತುಗಳನ್ನು ಕೇಳಬೇಡಿ ನಂಬಬೇಡಿ ಎಂದರು. ಹೋದ ಸರ್ಕಾರದಲ್ಲಿ ಬಹಳೇ ಅನಾಹುತಗಳಾಗಿ ಆರ್ಥಿಕ ಅಸಿಸ್ತಿನಿಂದ ಸರ್ಕಾರ ಅಂತಹದ್ದನ್ನು ಎಂದೂ ನೋಡಿಲ್ಲಾವೆಂದರು. ಸರ್ಕಾರ ಆರ್ಥಿಕವಾಗಿ ಬಲಿಷ್ಟಗೊಳ್ಳಬೇಕಾದರೆ ಪ್ರಜೆಗಳ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬೇಕೆಂದರು. ಅಗತ್ಯವಾಗಿ ಅವಶ್ಯವಿದ್ದಂತಹ ದಿನಸು ವಸ್ತುಗಳನ್ನು ಖರೀದಿ ಮಾಡುವಾಗ ಸರ್ಕಾರಕ್ಕೆ ಆದಾಯ ಬರುತ್ತದೆ ಕಾರಣ ಸ್ಥಿರತೆಯನ್ನು ಕಾಯಬೇಕೆಂದು ಉದಾರಿಸಿದ ಶಾಸಕರು ಮನೆ ಇಲ್ಲದವರಿಗೆ ಜೀವನ ನಡೆಸಲು ಸಾಧ್ಯವಿಲ್ಲಾ ಮೋದಲು ಹೋಟ್ಟೆ ತುಂಬಿಸುವ ಕೆಲಸ ಸರ್ಕಾರದ್ದಾಗಿರಬೇಕೆಂದರು. ಈ ಹಿಂದೆ ಕ್ಯಾಬಿನೇಟ್ ಅಪ್ರೂಲ್ ಇಲ್ಲದೇ ವಿಶೇಷ ಅನುದಾನ ಹೊರಡಿಸಿದ್ದಾರೆ ಈ ರೀತಿ ಇದುದ್ದರಿಂದ ಜನರ ಕೆಲಸ ಮಾಡಲು ಹೇಗೆ ಸಾಧ್ಯವೆಂದು ಪ್ರಶ್ನೀಸಿದ ನಾಡಗೌಡರು ಸಾಲ ಮಾಡಿದರೆ ಮುಂದಿನ ಸರ್ಕಾರ ನೋಡುತ್ತದೆ ಎಂದರೆ ಹೇಗೆ ಸಾದ್ಯವೆಂದರು. ಇಂತಹ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಿಕೊಳ್ಳಬೇಕೆಂದು ಜನತೆಗೆ ಏಚ್ಚರಿಸಿದ ಶಾಸಕರು ಸರ್ಕಾರ ಚಾರ್ಟಿಬಲ್ ಆರ್ಗನಾಯಿಜಿನೇಶನ್ ಅಂದರೆ ಜನರಿಗೋಸ್ಕರ ಮಾಡುವಂತಹ ವಿದ್ಯಾಭ್ಯಾಸಕ್ಕಾಗಿ ಹಾಗೂ ನೀರಾವರಿ ಯೋಜನೆಗಾಗಿ ವಿದ್ಯಾ ಸಂಸ್ಥೆಗಳನ್ನು ತಲೆ ಎತ್ತಿ ನಿಲ್ಲುವಂತೆ ಮಾಡಬೇಕೆಂದರು.

ಒಂದು ದಿನಕ್ಕೆ 1 ಲಕ್ಷ 30 ಸಾವಿರ ಮಹಿಳೆಯರು ಪ್ರಯಾಣ ಬಸ್ಸಿನಿಂದ ಮಾಡುತ್ತಾರೆ ಈಗ ಉಚಿತವೆಂದರೆ ಹೆಚ್ಚಾಗಬಹುದು ಸರ್ಕಾರ ನೀಡಿದಂತಹ ಸೌಲತ್ತು ಉಪಯೋಗ ಮಾಡಿಕೊಳ್ಳುವದು ಪ್ರಜೆಗಳ ಜವಾಬ್ದಾರಿಯಾಗಿದೆ ಎಂದರು. ನಾವು ನಿಶ್ಚಯಿಸಿರುವದು ಬಡವರಿಗೆ ಕೊಡುವ ಸಹಾಯದನ ಇದಾಗಿದೆ ಎಂದು ತಮಿಳು ನಾಡಿನಲ್ಲಿ ಜಾರಿಗೆ ಗೊಳಿಸಲಾದ ಬಸ್ಸಿನ ವಿಷಯ ಕುರಿತು ವಿವರಿಸಿದ ಶಾಸಕರು ಜವಾಬ್ದಾರಿಯ ನಾಗರಕರಾಗಬೇಕು ಅಂದರೆ ಯೋಜನೆಗಳು ಶಾಸ್ವತವಾಗಿ ನಡೆಯುತ್ತವೆ ಎಂದರು. ಮಹಿಳೆ ಎಂಬ ಸ್ಥಾನಮಾನಕ್ಕೆ ಪುರುಷರಾದವರು ಮಾನವೀಯತೆ ತೋರುವ ಕಾರ್ಯವಾಗಬೇಕೆಂದು ಉಪಸ್ಥಿತರಿದ್ದ ಪುರುಷರಿಗೆ ಕಿವಿಮಾತೇಳಿದ ಶಾಸಕರು ನಮ್ಮ ಸಂಸ್ಥೆಯನ್ನು ನಾವು ಬಧುಕಿಸಬೇಕು ಕೆಎಸ್‍ಆರ್.ಟಿ.ಸಿ ಬಸ್ಸುಗಳು ಉಳಿದವೆಂದರೆ ನಮ್ಮ ಆಸ್ತಿ ಉಳಿಯುತು ಅಂದರೆ ನಿಮ್ಮ ಆಸ್ತಿ ನಿಮ್ಮ ಹಕ್ಕು ಉಳಿಯುತು ಎಂಬುದನ್ನು ಅರೀತುಕೊಳ್ಳಿ ಎಂದು ಉಚಿತವೆನ್ನುವ ಆಸ್ತಿಗೆ ತೊಂದರೆಯಾದರೆ ನಾವೇ ಅನುಬವಿಸಬೇಕಾಗುತ್ತದೆ ಎಂದು ಹೇಳಿದ ಶಾಸಕರು. ಮುಂಬರುವ ದಿನಮಾನಗಳಲ್ಲಿ ಪ್ರತಿಯೊಂದ ಗ್ರಾಂ ಪಂಚಾಯ್ತಿಗೆ ಈಗ ಇದ್ದ ಅನುದಾನ ಸಾಲುತ್ತಿಲ್ಲಾ ಪ್ರತಿ ವರ್ಷಕ್ಕೆ 1 ಕೋಟಿ ಅನುದಾನ ಕೊಡಲು ತಿರ್ಮಾನಿಸಿದ್ದೇವೆಂದರು. ಚುನಾವಣೆಕ್ಕಿಂತ ಪೂರ್ವದಲ್ಲಿ 5 ನಮ್ಮ ಆಸ್ವಾಸನೆಗಳಲ್ಲಿ ಮಹತ್ವದ ಗ್ಯಾರೆಂಟಿ ಸ್ಕೀಂ ಎನ್ನುವದಾಗಿತ್ತು ಮಹಿಳೆಯರಿಗೆ ಉಚಿತವಾಗಿ ಕರ್ನಾಟಕ ರಾಜ್ಯದ ಗಡಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಇಂದಿನಿಂದ ಪ್ರಯಾಣ ಬೆಳೆಸಬಹುದಾಗಿದೆ ಎಂದು ಶಕ್ತಿಯೋಜನೆ ಕುರಿತು ಶಾಸಕ ನಾಡಗೌಡ ಬಹುಮಾರ್ಮಿಕವಾಗಿ ವಿವರಿಸಿದರು.

ವೇದಿಕೆಯ ಮೇಲೆ ತಹಶಿಲ್ದಾರ ಕೀರ್ತಿ ಚಾಲಕ, ಬಸ್ ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ, ಅಸ್ಕಿ ಪೌಂಡೇಶನ್ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಮುತ್ತಪ್ಪಣ್ಣ ಚಮಲಾಪೂರ, ಎಇಓ ಕ್ಯಾಪಟನ್ ಮಹೇಶಕುಮಾರ ಮಾಲಗತ್ತಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪ್ರಭುಗೌಡ ಮದರಕಲ್ಲ, ಶ್ರೀಮತಿ ನೀಲಮ್ಮ ಪಾಟೀಲ, ವ್ಹಿ.ಸಿ.ಹಿರೇಮಠ, ಯಾಸೀನ ಮಮದಾಪೂರ, ಫಯಾಜ್ ಉತ್ನಾಳ, ಎಂ.ಜಿ.ಪಾಟೀಲ, ಎಸ್.ಎನ್.ಪಾಟೀಲ, ಬಿ.ಎಸ್.ಗಬಸಾವಳಗಿ, ಎಂ.ಎಂ.ಚಲವಾದಿ, ರಮೇಶ ತಾಳಿಕೋಟಿ, ಡಿ.ಎಂ.ನಧಾಫ, ಮೊದಲಾದವರು ಉಪಸ್ಥಿತರಿದ್ದರು.

ಘಟಕ ಸಿಬ್ಬಂದಿಯವರಿಂದ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಬಸನಗೌಡ ಚೋಕ್ಕಾವಿ ಸ್ವಾಗತಿಸಿದರು. ಶ್ರೀಕಾಂತ ಪತ್ತಾರ ನಿರೂಪಿಸಿದರು. ಸಾರಿಗೆ ನಿಯಂತ್ರಕ ಎಸ್.ಬಿ.ದಶವಂತ ವಂದಿಸಿದರು.


ಮೈಕ ದುರಸ್ಥಿಗೊಳಿಸಿದ ಶಾಸಕ

ಶಕ್ತಿ ಯೋಜನೆಗೆ ಚಾಲನೆ ನೀಡಿದ ಶಾಸಕ ನಾಡಗೌಡ ಅವರು ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಮೈಕ್ ಕೈಕೊಟ್ಟಾಗ ದುರಸ್ಥಿಯಾಗದೇ ಇದ್ದಾಗ ಶಾಸಕ ನಾಡಗೌಡ ಅವರೇ ಸ್ವತಃ ಮೈಕ್‍ನ್ನು ದುರಸ್ಥಿಗೊಳಿಸಿ ನೇರೆದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಸಂಗವು ನಡೆಯಿತು.