ನುಡಿದಂತೆ ನಡೆದು ಅಮರನಾದ ಸಂತ: ಯಳಸಂಗಿ

ಕಲಬುರಗಿ:ಜ.3:ಮಹಾ ಜ್ಞಾನಿ ಸಿದ್ದೇಶ್ವರ ಮಹಾ ಸ್ವಾಮಿಗಳು ನುಡಿದಂತೆ ನಡೆದು ಜಗತ್ತಿಗೆ ಆದರ್ಶವಾದ ಮಹಾನ ಸಂತರಾಗಿದ್ದಾರೆ ಎಂದು ಜನಪರ ಹೋರಾಟಗಾರ ಪ್ರಭುದೇವ ಯಳಸಂಗಿ ಹೇಳಿದರು.
ನಗರದ ಲಾಲಗೇರಿ ಕ್ರಾಸ್ ಹತ್ತಿರ ಇರುವ ನಂದಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕನ್ನಡ ಜಾನಪದ ಪರಿಷತ್ ಉತ್ತರ ವಲಯದಿಂದ ಸಿದ್ದೇಶ್ವರ ಮಹಾಸ್ವಾಮಿಜಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ಆಧುನಿಕ ಯುಗದಲ್ಲಿ ಮಾತನಾಡುವವರ ಸಂಖ್ಯೆಗೆ ಲೆಕ್ಕವಿಲ್ಲ ನಡೆಗೂ ವ್ಯತ್ಯಾಸ ಇರುತ್ತದೆ ಆದರೆ ಸಿದ್ದೇಶ್ವರ ಮಹಾಸ್ವಾಮಿಗಳು ನಡೆ-ನುಡಿಗಳಲ್ಲಿ ವ್ಯತ್ಯಾಸ ಬರದೇ ಇದ್ದುದರಲ್ಲಿಯೇ ಸಂತೃಪ್ತಿಯಿಂದ ಬದುಕು ಸಾಗಿಸಿ ಸರ್ವರ ಮನದಲ್ಲಿ ನಂದದ ಆನಂದದ
ಜ್ಯೋತಿಯಾಗಿದ್ದಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಇಂದಿನ ಸಂದರ್ಭದಲ್ಲಿ ಪ್ರಶಸ್ತಿ, ಸನ್ಮಾನಕ್ಕೆ ಬೆಲೆ
eಕೊಟ್ಟು ಜೀವನ ನಡೆಸುವವರ ಮಧ್ಯದಲ್ಲಿ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಹಲವಾರು ಪ್ರಶಸ್ತಿಗಳು ಪಡೆಯದೆ ನಮ್ಮೆಲ್ಲರಿಗೂ ಆದರ್ಶ ಮಹಾನ ಜ್ಞಾನಿಗಳಾಗಿದ್ದಾರೆ. ಹಾಕಿಕೊಳ್ಳುವ ಅಂಗಿಗೆ ಜೇಬು ಇದ್ದರೆ ಏನಾದರೂ ವಸ್ತು ಇಡಬೇಕೆಂಬ ಆಸೆ ಹುಟ್ಟುತ್ತದೆ ಎಂದು ಅರಿತು ಜೇಬು ಇರದೆ ಸರಳತೆಗೆ ಹೆಸರುವಾಸಿಯಾದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಜ್ಞಾನದ ಪಾಂಡಿತ್ಯದೊ0ದಿಗೆ ಹಲವಾರು ಭಾಷೆಗಳಲ್ಲಿ ಜ್ಞಾನಾರ್ಜನೆ ಮಾಡಿರುವುದು ಹೆಮ್ಮೆಯ ವಿಷಯ. ಇಂತಹ ಮಹಾನ ಸಂತರು
ಶಾರೀರಕವಾಗಿ ನಮ್ಮನಗಲಿರಬಹುದು ಆದರೆ ಮಾನಸಿಕವಾಗಿ ಸದಾ ನಮ್ಮ ಜೊತೆಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಮಲಕಾರಿ ಪೂಜಾರಿ, ಶರಣು ಜೆ ಪಾಟೀಲ, ಶ್ರವಣಕುಮಾರ ಮಠ,ಜನಪದ ಕಲಾವಿದ ರಾಜು ಹೆಬ್ಬಾಳ, ಶರಣು ಕಲ್ಮಠ,ದಿಲೀಪಕುಮಾರ ಭಕ್ರೆ, ನಾಗೇಂದ್ರಯ ಮಠ,ಶರಣು ಅಜಾತಪುರ,ಮಲ್ಲಿಕಾರ್ಜುನ ವೈಜಾಪುರ, ಚನ್ನವೀರ ಮಠ, ಲಿಂಗಯ್ಯ ಸ್ವಾಮಿ, ಅಸ್ಲಾಂ ಶೇಖ್ ಸೇರಿದಂತೆ ಇತರರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮೇಣದಬತ್ತಿ ಹಚ್ಚುವ ಮೂಲಕ
ಶ್ರದ್ಧಾಂಜಲಿ ಅರ್ಪಿಸಲಾಯಿತು.