ನುಡಿದಂತೆ ನಡೆದಿದ್ದೇವೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಜೂ.3-ಚುನಾವಣೆ ಪೂರ್ವ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದು ನಾವು ನುಡಿದಂತೆ ನಡೆದಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ/ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ನುಡಿದಂತೆ ನಡೆದು ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನ ಕಾಂಗ್ರೆಸ್ ಸರ್ಕಾರ ಇಂದು ಈಡೇರಿಸಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ.
ಗ್ಯಾರಂಟಿ ನಂ 1 ಗೃಹಜ್ಯೋತಿ: ಒಂದು ಕುಟುಂಬದ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿಗೆ 10% ಸೇರಿಸಿ 200 ಯೂನಿಟ್ ವರೆಗೆ ಪ್ರತಿ ತಿಂಗಳು ಉಚಿತ ಯೋಜನೆ ಜುಲೈ 1 ರಿಂದ ಜಾರಿ.
ಗ್ಯಾರಂಟಿ ನಂ 2 ಗೃಹಲಕ್ಷ್ಮಿ: ಎಪಿಎಲ್ ಮತ್ತು ಬಿಪಿಎಲ್ ಕುಟುಂಬದ ಯಜಮಾನಿಯ ಅಕೌಂಟ್ ಗೆ ಮಾಸಿಕ 2,000 ಹಣ ಪಾವತಿ.ಜೂನ್ 15 – ಜುಲೈ 15 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ. ಜುಲೈ 15 – ಆಗಸ್ಟ್ 15 ರವರೆಗೆ ಅರ್ಜಿ ಪರಿಶೀಲನೆ, ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ, ನೇರವಾಗಿ ಅಕೌಂಟ್‍ಗೆ ಹಣ ಜಮೆ.
ಗ್ಯಾರಂಟಿ ನಂ 3 ಅನ್ನಭಾಗ್ಯ: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಏಉ ಆಹಾರ ಸಾಮಾಗ್ರಿ ಉಚಿತ ಯೋಜನೆ ಜುಲೈ 1 ರಿಂದ ಜಾರಿ.
ಗ್ಯಾರಂಟಿ ನಂ 4 ಶಕ್ತಿ :ಎಲ್ಲಾ ಮಹಿಳೆಯರಿಗೂ ಕರ್ನಾಟಕದಾದ್ಯಂತ ಸರ್ಕಾರಿ ಬಸ್ ಪ್ರಯಾಣ (ಂಅ ಹಾಗೂ ಲಕ್ಷುರಿ ಬಸ್ ಹೊರತುಪಡಿಸಿ) ಉಚಿತ ಯೋಜನೆ ಜೂನ್ 11 ರಿಂದ ಜಾರಿ.
ಗ್ಯಾರಂಟಿ ನಂ 5 ಯುವನಿಧಿ :2022-23ರಲ್ಲಿ ತೇರ್ಗಡೆ ಹೊಂದಿ 180 ದಿನ ಕಳೆದರೂ ಉದ್ಯೋಗ ದೊರಕದ ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ, ಡಿಪೆÇ್ಲೀಮಾ ಪದವೀಧರರಿಗೆ 1500 ರೂಪಾಯಿ 2 ವರ್ಷ ಅಥವಾ ಕೆಲಸ ಸಿಗುವವರೆಗೆ ನಿರುದ್ಯೋಗ ಭತ್ಯೆ ಜಾರಿ. ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತು ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.