ನುಗ್ಗೆ ಮರದಿಂದ ವಿವಿಧ ಕಾಯಿಲೆಗಳಿಗೆ ರಾಮಬಾಣ

ಕಲಬುರಗಿ : ಡಿ.2:ನಮ್ಮ ದೇಶದಲ್ಲಿ ಆದಿ ಅನಾದಿಕಾಲದಿಂದಲೂ ಆಯುರ್ವೇದ ಔಷಧಗಳಿಗೆ ಬಹಳ ಪ್ರಾಮುಖ್ಯತೆ ದೊರೆಯುತ್ತಲೇ ಬಂದಿದೆ. ಅದೇ ಪ್ರಕಾರ ನುಗ್ಗೆ ಮರದ ವಿಷಯ ಹೇಳುವುದಾದರೆ ಅದರ ಮೂಲ ಭಾರತದಲ್ಲಿಯ ಆಗ್ರಾ, ತಮಿಳುನಾಡು, ಆದಿವಾಸಿ ಬುಡಕಟ್ಟು ಜನಾಂಗ ವಾಸಿಸುವ ಭೂ ಭಾಗಗಳಲ್ಲಿ ಕಾಣ ಬರುವವು. ನಮ್ಮಲ್ಲಿ ಪುರಾತನ ಕಾಲದಿಂದಲೂ ಋಷಿ ಮುನಿಗಳು ಆಯುರ್ವೇದಲ್ಲಿ ಕಂಡು ಹಿಡಿದ ದಿವ್ಯ ಔಷಧದ ಮರಗಳನ್ನು ಬೆಳೆಸಿ ಅದರ ಉಪಯೋಗದ ಬಗ್ಗೆ ತಿಳಿಸುತ್ತಾ ಬಂದಿದ್ದಾರೆ. ಅದರಲ್ಲಿ ಈಗಲೂ ನಮ್ಮ ಜೀವನದಲ್ಲಿ ಹಿರಿಯರಿಂದ ಕಲೆತ ಮನೆ ಮದ್ದಿನ ಉಪಯೋಗವನ್ನು ಮಾಡುತ್ತ, ನಮ್ಮ ಮನೆಯ ಹಿತ್ತಲದಲ್ಲಿಯ ಗಿಡಮೂಲಿಕೆಗಳಿಂದ ಎಲ್ಲ ಕಾಯಿಲೆಗಳಿಗೆ ಔಷಧಿ ಪಡೆದುಕೊಳ್ಳುತ್ತಲಿದ್ದೆವೆ. ಎಲ್ಲ ಮರಗಳಲ್ಲಿ ನುಗ್ಗೆ ಮರ ಎಲ್ಲ ಕಾಯಿಲೆಗಳಿಗೆ ರಾಮಬಾಣ ಅಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ ನಮ್ಮ ನಂತರ ಮುಂದಿನ ಪೀಳಿಗೆಗಳಿಗೂ ಅವುಗಳನ್ನು ಬೆಳೆಸಿ ಉಪಯೋಗ ತಗೆದುಕೊಳ್ಳುವುದರ ಬಗ್ಗೆ ಮಾಹಿತಿಗಳನ್ನು ತಿಳಿಹೇಳಿತ್ತಲೇ ಇದ್ದೆವೆ..

ನುಗ್ಗೆ ಗಿಡದ ಪ್ರತಿಯೊಂದು ಭಾಗ ಆಯುರ್ವೇದ ಔಷಧೀಯ ಗುಣ ಹೊಂದಿದೆ. ಪೆÇೀಷಕಾಂಶಗಳ ದೊಡ್ಡ ಆಗರವೇ ಅಡಗಿದೆ. ಇಡೀ ವಿಶ್ವದಲ್ಲಿಯೇ ನುಗ್ಗೆಯಿಂದ ತಯಾರಿಸಲಾದ ಸಾಕಷ್ಟು ಆಹಾರ ಮತ್ತು ಔಷಧಿಗಳ ಉಪಯೋಗ ಮಾಡಿ ಕೊಳ್ಳುವುದನ್ನು ಕೇಳುತ್ತಲೂ, ಕಾಣುತ್ತಲೂ ಇದ್ದೆವೆ. ನುಗ್ಗೆಯ ತಪ್ಪಲು, ಕಾಯಿ, ಹೂವು, ಕಾಂಡಗಳಿಂದ ವಿಧವಿಧವಾದ ಪಕ್ವಾನ್ನಗಳನ್ನು ತಯಾರಿಸಿ, ಸೇವಿಸಿ ಆರೋಗ್ಯ ವೃದ್ಧಿಸಿ ಕೊಳ್ಳಬಹುದು. ನುಗ್ಗೆಯ ಮರ ಪ್ರತಿಯೊಬ್ಬರು ತಮ್ಮ ಮನೆಯ ಹಿತ್ತಲದಲ್ಲಿ, ಕೈತೋಟದಲ್ಲೂ ಬೆಳೆಸಬಹುದು. ಒಂದು ನುಗ್ಗೆ ಮರದಿಂದ ಮನೆಯ ಕುಟುಂಬದವರೆಲ್ಲರೂ ಆರೋಗ್ಯದಿಂದ ಬದುಕಬಹುದು. ಇದು ಮಾತ್ರೆಗಳಿಗಿಂತಲೂ ಹೆಚ್ಚಿನ ಪೆÇೀಷಕಾಂಶಗಳನ್ನು ಹೊಂದಿರುತ್ತದೆ.
ಉದಾಹರಣೆ: ನಾವು ಬಳಸುವ ನಿಂಬೆ, ಕಿತ್ತಳೆ ಹಣ್ಣುಗಳಿಗಿಂತಲೂ 7 ರಷ್ಟು ಅಧಿಕವಾದ ವಿಟಮಿನ್ ಸಿ ಇದರಲ್ಲಿದೆ. ಕ್ಯಾರೆಟಿಗಿಂತಲೂ 4 ರಷ್ಟು ಏ ಜೀವಸತ್ವ ಈ ನುಗ್ಗೆ ಸೊಪ್ಪಿನಲ್ಲಿದೆ. ಹಾಲಿನಲ್ಲಿ ಇರುವ ಕ್ಯಾಲ್ಸಿಯಂಗಿಂತ 4 ರಷ್ಟು ಹೆಚ್ಚು ಕ್ಯಾಲ್ಸಿಯಂ ನುಗ್ಗೆ ಸೊಪ್ಪಿನಲ್ಲಿದೆ ಹಾಗೂ ಪಾಲಕ್ ಸೊಪ್ಪಿಗಿಂತ 6 ರಷ್ಟು ಕಬ್ಬಿಣದ ಅಂಶ, ಮೊಟ್ಟೆಯ ಬಿಳಿ ಭಾಗಕ್ಕಿಂತ 2 ರಷ್ಟು ಹೆಚ್ಚು ಪೆÇ್ರಟೀನ್, ಬಾಳೆ ಹಣ್ಣಿಗಿಂತ 3 ರಷ್ಟು ಪೆÇಟ್ಯಾಷಿಯಂ ಹೀಗೆ ಎಲ್ಲ ತರಹದ ಜೀವಸತ್ವಗಳು ಈ ನುಗ್ಗೆ ಸೊಪ್ಪಿನಲ್ಲಿ ಕಂಡುಬರುತ್ತವೆ. ಆದ್ದರಿಂದ ಆರೋಗ್ಯಕ್ಕೆ ಇದರ ಸೇವನೆ ತುಂಬಾ ಮುಖ್ಯವಾಗಿದೆ. ಇದರಲ್ಲಿ ಅಧಿಕ
ನುಗ್ಗೆ ಸೊಪ್ಪಿನಲ್ಲಿ ಪೆÇ್ರೀಟೀನ್, ಎನರ್ಜಿ ಕ್ಯಾಲ್ಸಿಯಂ, ಐರನ್, ಖನಿಜ ಲವಣ, ನಾರಿನಂಶ ಮತ್ತು ನೀರಿನಂಶ ಸಾಕಷ್ಟಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ, ಅಸ್ತಮಾ ಕಾಯಿಲೆ, ಮಧುಮೇಹ, ಕ್ಯಾನ್ಸರ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಮೂತ್ರ ಸಂಬಂಧಿ ಕಾಯಲೆ, ಕಣ್ಣಿನ ರೋಗ, ಜ್ವರ ಮತ್ತು ಮಾನಸಿಕ ಖನ್ನತೆಯಿಂದಲೂ ಮುಕ್ತರಾಗಬಹುದು. ಇದರ ಸೇವನೆಯಿಂದ ಗರ್ಭಿಣಿ ಸ್ತ್ರೀಯರ ಗರ್ಭದಲ್ಲಿದ್ದ ಮಗುವನ್ನು ಚೆನ್ನಾಗಿ ಬೆಳೆಯುವದಲ್ಲದೆ ಅದರಲ್ಲಿನ ಅಧಿಕ ಪೆÇೀಷಕಾಂಶವು ತಾಯಿಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗು ಬಾಣಂತಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟಿದ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ. ನುಗ್ಗೆಯಲ್ಲಿ, ಬಾಯಿ ಹುಣ್ಣು ಮತ್ತು ಹೊಟ್ಟೆಯಲ್ಲಿಯ ಹುಣ್ಣುಗಳ ವಾಸಿಮಾಡುವ ಗುಣವು ಇದೆ. ನುಗ್ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ಇರುಳು ಗಣ್ಣು ಕಾಯಿಲೆಯ ಉಪಶಮನ ಕೂಡ ಮಾಡುತ್ತದೆ. ಇದರ ಹಸಿ ಕಾಯಿಯ ಉಪಯೋಗದಿಂದ ಜಂತು ಹುಳು ಭಾದೆ ನಿವಾರಿಸಿಕೊಳ್ಳಬಹುದು. ಇದರ ಬೀಜದ ಎಣ್ಣೆಯಿಂದ ಚರ್ಮದ ಕಾಯಿಲೆಯನ್ನು ಗುಣಪಡಿಸಿ ಕೊಳ್ಳಬಹುದು. ಹೂವುಗಳನ್ನು ಬೇಯಿಸಿ ತಿಂಡಿ, ತಿನಿಸುಗಳ ರೂಪದಲ್ಲಿ ತಯಾರಿಸಿಕೊಂಡು ತಿಂದಲ್ಲಿ ಆರೋಗ್ಯವು ಉತ್ತಮವಾಗಿರುವುದಲ್ಲದೆ ಶರಿರದಲ್ಲಿ ಬಲ ವೃದ್ಧಿಸುವುದು ಹಾಗೂ ಶರೀರದ ನರನಾಡಿಗಳಲ್ಲಿ ಸಮರ್ಪಕವಾಗಿ ರಕ್ತ ಸಂಚಲನದ ಕಾರ್ಯನಿರ್ವಹಣೆಗೆ ದಾರಿಮಾಡಿಕೊಡಲಿದೆ.

ನುಗ್ಗೆ ಗಿಡದ ಪ್ರತಿಯೊಂದು ಭಾಗ ಬಳಿಸಿಕೊಂಡು ವಡೆ, ಸಾರು, ಚಟ್ನಿ, ಆಂಬೊಡೆ, ಪಲಾವ್, ದೊಸೆ, ರೊಟ್ಟಿ, ಪರೋಟಾ, ರೈಸ್ ಭಾತ್, ರಸಂ ಮತ್ತು ಚಪಾತಿ ಇತರ ಸ್ವಾದಿಷ್ಟ ಆಹಾರಗಳನ್ನು ತಯಾರಿಸಿ ಸೇವಿಸಬಹುದು. ನುಗ್ಗೆ ಸೊಪ್ಪಿಗೆ ಮೊದಲಿನಿಂದಲೂ ಮಾಂತ್ರಿಕ ಸೊಪ್ಪೆಂದು ಕರೆಯುವುದುಂಟು. ನುಗ್ಗೆ ಮರವನ್ನು ಎಲ್ಲಿಯಾದರೂ ಬೆಳೆಸಿದರು ಅನಕೂಲಕರ. ಈ ಮರಕ್ಕೆ ನೀರಿನ ಅವಶ್ಯಕತೆಯೂ ಬಹಳ ಬೇಕಾಗಿಲ್ಲ. ವರ್ಷದ ಹನ್ನೆರಡು ತಿಂಗಳು ಉಪಯೋಗ ಬೀಳುವಂತಹದು. ನುಗ್ಗೆ ಸೊಪ್ಪನ್ನು(ಬೇಕಾದಲ್ಲಿ ಸ್ವಲ್ಪ ಕ್ಯಾರೆಟ್ ಸೇರಿಸಿ) ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲುಗಳನ್ನು ಕರಗಿಸುತ್ತದೆ. ನುಗ್ಗೆ ಸೊಪ್ಪಿನ ಎಲೆಗಳನ್ನು ಬಳಸಿ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಕೂದಲು ಚೆನ್ನಾಗಿ ಬೆಳೆಯುತ್ತವೆ. ಇದಕ್ಕೆ ಹಾಲು ಸೇರಿಸಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. (ಒಂದು ಲೋಟ ಹಾಲಿಗೆ 1 ರಿಂದ 2 ಚಮಚ ರಸ ಸಾಕಾಗುತ್ತದೆ). ಈಗಿನ ಆಹಾರ ಪದ್ಧತಿಯ ಸೇವನೆಯಿಂದ ಶರೀರದಲ್ಲಿ ಕೊಬ್ಬಿನಾಂಶ ತುಂಬಿಕೊಂಡು ಪರಿತಪಿಸುವ ರೋಗಿಗಳಿಗೂ ನುಗ್ಗೆಯ ಸೇವನೆಯಿಂದ ಶರೀರದಲ್ಲಿ ಪ್ರತಿದಿನ ಬೆಳೆಯುವ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲವನ್ನು ನಿಲ್ಲಿಸಿ, ಶರೀರದ ತೂಕವನ್ನು ಕಡಿಮೆಮಾಡಿ ಆರೋಗ್ಯಯುತ ದೇಹವನ್ನು ಕರುಣಿಸುತ್ತದೆ..

ಇಂದಿನ ವೈಜ್ಞಾನಿಕ ದೃಷ್ಟಿಕೋನ ಎಷ್ಟು ಬೆಳೆದರೂ ನಮ್ಮ ದೇಶದ ನಿಸರ್ಗದ ಸಂಪತ್ತಿನಲ್ಲಿ ವಿಶೇಷ ಸತ್ವಗಳುಳ್ಳ ಗಿಡಮೂಲಿಕೆಗಳ ಮುಂದೆ ತಲೆ ಬಾಗಲೇ ಬೇಕು. ಪ್ರಾಚೀನ ಈಜಿಪ್ಟಿನಲ್ಲಿ 4000 ವರ್ಷಗಳ ಹಿಂದೆ ನುಗ್ಗೆ ಸೊಪ್ಪನ್ನು ಅವರ ಔಷಧೀಯ ಪದ್ಧತಿಗಳಿಗೆ ಉಪಯೋಗಿಸಿ ಅದರಿಂದ ಆಗಿದ್ದ ಒಳ್ಳೆಯ ಪರಿಣಾಮಗಳನ್ನು ಗಮನಿಸಿ ನುಗ್ಗೆ ಮರಕ್ಕೆ ” ಶಾಗಾರ ಅಲ್ ರೌವಾಕ್ ” (ಶುದ್ಧ ಸಸ್ಯ ) ಎಂದು ಅವರ ಭಾಷೆಯಲ್ಲಿ ಹೆಸರಿಟ್ಟರು. ಪರಿಸರದಲ್ಲಿ ಕಂಡು ಬರುವ ದುಷ್ಪರಿಣಾಮಗಳ ಮಧ್ಯೆ ಹಾಗೂ ಆಧುನಿಕ ಜೀವನದ ಒತ್ತಡಗಳ ಮಧ್ಯೆ ಆರೋಗ್ಯವಂತರಾಗಿರಲು ನುಗ್ಗೆಯ ಮರದ ಲಾಭಗಳನ್ನು ಉಪಯೋಗಗಳನ್ನು ಪಡೆದುಕೊಳ್ಳೊಣ, ಉತ್ತಮ ಆರೋಗ್ಯದೊಂದಿಗೆ ಅಲೋಪಧಿ ಔಷಧಗಳಿಗೆ ವಿದಾಯ ಹೇಳಿ, ಆರೋಗ್ಯವಂತರಾಗಿ ಬಾಳೋಣ.

ಲೇಖಕರು
ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ