ನುಗ್ಗೆ ತಂದ ಹಿಗ್ಗು…….

(ರಮೇಶ್ ನಾಡಿಗೇರ)
ಲಕ್ಷ್ಮೇಶ್ವರ/ಶಿರಹಟ್ಟಿ , ಮಾ 29: ಕೃಷಿ ಕ್ಷೇತ್ರದಲ್ಲಿನ ವೈಫಲ್ಯದಿಂದ ಬೇಸತ್ತಿರುವ ರೈತ ಸಮುದಾಯ ಕೈ ಹಿಡಿಯುತ್ತಿರುವ ತೋಟಗಾರಿಕೆ ಅತ್ತ ಹೆಚ್ಚು ವಾಲುತ್ತಿದ್ದಾರೆ. ಲಭ್ಯವಿರುವ ನೀರಿನ ಮೂಲಗಳನ್ನೇ ಬಳಸಿಕೊಂಡು ಹೂ ನಿರಾವರಿ ಮೂಲಕ ಲಾಭದಾಯಕದತ್ತ ರೈತರು ಬೆಳೆ ಬೆಳೆಯುತ್ತಿದ್ದಾರೆ.
ಬೆಳ್ಳಟ್ಟಿ ಗ್ರಾಮದ ರೈತರಾದ ಸಹದೇವ ರೆಡ್ಡಿ ಎಸ್ ಮರಡ್ಡಿಯವರು ತಮ್ಮ 2.5 ಎಕರೆ ಜಮೀನಿನಲ್ಲಿ ನುಗ್ಗೆ ಬೆಳೆ ಬೆಳೆದು ಹರ್ಷದ ಹೊಳೆ ಹರಿಸಿದ್ದಾರೆ. ನುಗ್ಗೆ ಅವರು ಪಾಲಿಗೆ ಹಿಗ್ಗು ತಂದಿದೆ ಕಳೆದ ವರ್ಷ ತಮ್ಮ 2.5 ಎಕರೆ ಜಮೀನಿನಲ್ಲಿ ?ಠ88 ಅಡಿ ನುಗ್ಗೆ ನಾಟಿ ಮಾಡಿದ್ದು ಒಟ್ಟು 20450 ಸಸಿಗಳನ್ನು ನಾಟಿ ಮಾಡಿದ್ದು ಕಳೆದ ವರ್ಷ ಈ ಬೆಳೆ ಸಮೃದ್ಧ ಬೆಳೆ ಬಂದಿದ್ದು ಲಕ್ಷಾಂತರ ರೂಪಾಯಿ ಲಾಭ ನೀಡಿದೆ.
ತೋಟಗಾರಿಕೆ ಇಲಾಖೆಯಯವರ ಉತ್ಸಾಹಿ ರೈತನಿಗೆ ಎಮ್.ಎನ್.ಆರ್.ಇ.ಜಿ ಯೋಜನೆಯಡಿ 61 ಸಾವಿರ ರೂಗಳ ನೆರವು ದೊರಕಿಸಿದ್ದು ಸರ್ಕಾರದ ಒಂದು ಲಕ್ಷ ರೂಪಾಯಿ ಸಹಾಯ ಧನದ ರೂಪದಲ್ಲಿ ಇಲಾಖೆ ಮುಂದಾಗಿದೆ. ಒಂದು ವರ್ಷದವರೆಗೂ ಅತ್ಯಂತ ಪ್ರಾಮಾಣಿಕವಾಗಿ ಕಾಯಕ ನಿಷ್ಠರಾಗಿ ಬೆವರು ಸುರಿಸಿದ್ದರ ಫಲವಾಗಿ ನುಗ್ಗೆಕಾಯಿ ಭರಪೂರ ಬಿಟ್ಟಿದ್ದು ಭಾರಿ ಬೇಡಿಕೆ ಇರುವುದರಿಂದ ಮರಡ್ಡಿಯವರ ಪಾಲಿಗೆ ನುಗ್ಗೆ ಹಿಗ್ಗು ತಂದಿದೆ.
ಈಗಾಗಲೇ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂಗಳ ನುಗ್ಗೆ ಮಾರಾಟ ಮಾಡಿರುವ ಸಹದೇವ ರೆಡ್ಡಿ ಅವರು ಪ್ರತಿ ಕ್ವಿಂಟಲ್ ಗೆ 8 ಸಾವಿರ ರೂಗಳಂತೆ ರಾಣೆಬೆನ್ನೂರು , ಹಾವೇರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಇದರಿಂದ ಸಾಕಷ್ಟು ಲಾಭ ಆಗಿದ್ದು ಇನ್ನು ಸುಮಾರು 1 ರಿಂದ 2 ಲಕ್ಷ ರೂಪಾಯಿಗಳ ನುಗ್ಗೆ ಮಾರಾಟ ಮಾಡುವ ಆಶಾ ಭಾವನೆಯನ್ನು ಹೊಂದಿದ್ದಾರೆ.
ನುಗ್ಗೆ ಸೋಮರೆಡ್ಡಿ ಅವರತ್ತ ನುಗ್ಗೆ ನುಗ್ಗಿದ್ದು ಅವರ ಪಾಲಿಗೆ ಲಕ್ಷ್ಮೀ ಕ್ರಟಾಕ್ಷವಾಗಿದೆ.
ರೈತರು ಪರಿಯಾಯ ಬೆಳೆ, ಸಮಗ್ರ ಬೆಳೆ ಆಧುನಿಕ ತಂತ್ರಜ್ಞಾನ, ಮಾರುಕಟ್ಟೆ ಮಾಹಿತಿ ಪಡೆದು ಅಧಿಕಾರಿಗಳ ಸಂಪರ್ಕದಿಂದ ಸರ್ಕಾದ ಯೋಜನೆಗಳ ಲಾಭ ಪಡೆದುಕೊಂಡು ಮುನ್ನಡೆಯಬೇಕು ಅಷ್ಟೆ.
ಈ ಕುರಿತು ಸಂಜೇವಾಣಿ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ಸುರೇಶ್ ಕುಂಬಾರ ಅವರನ್ನು ಮಾತನಾಡಿಸಿದಾಗ, ಅನೇಕ ರೈತರು ತೋಟಗಾರಿಕೆ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪ್ರಸ್ತುತ ಬೆಳ್ಳಟ್ಟಿ ರೈತರಾದ ಸಹದೇವ ರೆಡ್ಡಿ ಅವರು ತಮ್ಮ ಜಮೀನಿನಲ್ಲಿ ನುಗ್ಗೆ ಬೆಳೆಯಲು ಮುಂದಾದಾಗ ಅವರಿಗೆ ಸಲಹೆ ಸೂಚನೆಗಳನ್ನು ನೀಡಿ ಸರ್ಕಾರದ ನೆರವು ದೊರಕಿಸಿಕೊಡುವ ಭರವಸೆ ನೀಡಿದ್ದರಿಂದ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನುಗ್ಗೆ ಬೆಳೆದ್ದಿದ್ದು ಅವರಿಗೆ ಲಾಭದಾಯಕವಾಗಿದೆ. ಇಲಾಖೆಯ ವತಿಯಿಂದ ಇಷ್ಟರಲ್ಲಿಯೇ ಒಂದು ಲಕ್ಷ ರೂಪಾಯಿ ಸಹಾಯ ಧನ ನೀಡುವುದಾಗಿ ತಿಳಿಸಿದರು.
ರೈತ ಸಹದೇವ ರೆಡ್ಡಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಧಿಕಾರಿ ಸುರೇಶ್ ಕುಂಬಾರ ಅವರ ಮಾರ್ಗದರ್ಶನದಿಂದ ಧೈರ್ಯವಾಗಿ ನುಗ್ಗೆ ಬೆಳೆ ಬೆಳೆದಿದ್ದು ಅದು ನನ್ನ ಪಾಲಿಗೆ ವರದಾನವಾಗಿದೆ ಎಂದರಲ್ಲದೆ ಈಗಾಗಲೇ ಒಂದುವರೆ ಲಕ್ಷ ರೂಪಾಯಿ ನುಗ್ಗೆ ಮಾರಾಟ ಮಾಡಿದ್ದು ಇನ್ನು ಅಷ್ಟು ಬೆಳೆ ಬರುವ ನಿರೀಕ್ಷೆ ಇದೆ ಎಂದರು.