ನುಗ್ಗೆ ಕಾಯಿ ಸಾಂಬಾರ್

ಬೇಕಾಗುವ ವಿಧಾನ
*ನುಗ್ಗೆ ಕಾಯಿ
*ಬದನೆಕಾಯಿ
*ತೊಗರಿಬೇಳೆ
*ಅರಿಶಿಣ
*ಎಣ್ಣೆ
*ಇಂಗು
*ಸಾಂಬಾರ್ ಪುಡಿ
*ಸಾಸಿವೆ
*ಒಣಮೆಣಸಿನಕಾಯಿ
*ಬೆಳುಳ್ಳಿ
*ಕರಿಬೇವು
*ಈರುಳ್ಳಿ
*ದಪ್ಪ ಮೆಣಸಿನಕಾಯಿ
*ಹುಣಸೇರಸ
*ಬೆಲ್ಲ
*ಕೊತ್ತಂಬರಿ ಸೊಪ್ಪು
*ಉಪ್ಪು

ಮಾಡುವ ವಿಧಾನ :

ಕುಕ್ಕರ್‌ಗೆ ಒಂದಿಷ್ಟು ನೀರು, ತೊಗರಿಬೇಳೆ, ಅರಿಶಿಣ, ಎಣ್ಣೆ ಹಾಕಿ ೩ ವಿಷಲ್ ಕೂಗಿಸಿ. ಇಂಗು, ಸಾಂಬಾರ್ ಪುಡಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಒಣಮೆಣಸಿನಕಾಯಿ, ಬೆಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ದಪ್ಪಗೆ ಹೆಚ್ಚಿಕೊಂಡ ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ, ಬದನೇಕಾಯಿ ಹಾಕಿ ಬೇಯಿಸಿಕೊಳ್ಳಿ. ನಂತರ ತೊಗರಿಬೇಳೆ ಇರುವ ಕುಕ್ಕರ್‌ಗೆ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ರುಬ್ಬಿಕೊಂಡ ಮಸಾಲಾ, ಹುಣಸೇರಸ, ಉಪ್ಪು, ಬೆಲ್ಲ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ೩ ವಿಶಲ್ ಕೂಗಿಸಿದರೆ ನುಗ್ಗೆ ಕಾಯಿ ಸಾಂಬಾರ್ ರೆಡಿ.