ನುಂಗಲಾಗದ, ಉಗುಳಲಾಗದ ಬಿಸಿ ತುಪ್ಪ

ಲಿಂಗಸೂಗೂರು ವಿಧಾನಸಭಾ ಕ್ಷೇತ್ರ:ಲಿಂಗರಾಜು ಕೋಟೆ ಬಿಜೆಪಿಯಿಂದ ಟಿಕೆಟ್ ಪ್ರಬಲ ಆಕಾಂಕ್ಷಿ
ಸಂಜೆವಾಣಿ ವರದಿ
ಲಿಂಗಸೂಗೂರು,ಫೆ. ೨೨- ಬಿಸಿಲಿನ ನಾಡಲ್ಲಿ ಚುನಾವಣೆ ದಿನೇ ದಿನೇ ಒಂದೊಂದು ತಿರುವು ಕಾಣುತ್ತಿದೆ, ಮುಖ್ಯವಾಗಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಹಲವಾರ ನಡುವೆ ಪೈಪೋಟಿ ನಡೆದಿದೆ ಕೊನೆ ಕ್ಷಣದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರಿಗೆ ಬಿಸಿ ತುಪ್ಪವಾಗುತ್ತೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ.
ಲಿಂಗಸೂಗೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಬಯಸಿ ಮೂಲತಃ ದೇವದುರ್ಗದವರಾದ ಹೈಕೋರ್ಟ್ ನ ಹಿರಿಯ ವಕೀಲರು, ರಾಜಕೀಯ ಹಿನ್ನಲೆಯುಳ್ಳವರು, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿ ಕಾನೂನು ಪ್ರಕೋಷ್ಠಕರಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜ ಕೋಟೆಯವರು ಟಿಕೆಟ್ ಬಯಸಿ ಕ್ಷೇತ್ರದ ಹಲವಾರು ಮುಖಂಡರ ಜೊತೆಗೆ ಮಾತುಕತೆ ನಡಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸುಧಾರಣೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದೂ ಅದಕ್ಕೆ ಪರಿಹಾರವಾಗಿ ಪಕ್ಕದ ಜಿಲ್ಲೆಯಲ್ಲಿ ಹರಿಯುವ ನದಿಯಾದ ಬಸವಸಾಗರ ಡ್ಯಾಮ್, ಹಾಗೂ ಕೃಷ್ಣ ನದಿಯಿಂದ ಹೆಚ್ಚುವರಿಯಾಗಿ ನೀರನ್ನು ಪಡೆದ ಗಡಿ ಪ್ರದೇಶದಲ್ಲಿರುವ ಹಳ್ಳಿಗಳ್ಳಲಿರುವ ಜನರಿಗೆ ಉಪಯೋಗವಾಗುವ ಹಾಗೆ ಕಾರ್ಯ ಮಾಡಬೇಕು ಈ ಕಾರ್ಯವನ್ನು ಲಿಂಗರಾಜ ಕೋಟೆಯವರು ಮಾಡುತ್ತಾರೆ ಎಂದು ಶರಣಯ್ಯ ಅವರು ತಿಳಿಸಿದರು.
ಲಿಂಗರಾಜ ಕೋಟೆಯವರು ಕ್ಷೇತ್ರಕ್ಕೆ ಹಳಬರು ಇವರು ಈ ಹಿಂದೆ ನಡೆದಿರುವ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲಾ ಪಕ್ಷದ ಮುಖಂಡರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಾರೆ, ರಾಜ್ಯ ಹಾಗೂ ಕೇಂದ್ರದ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಆರ್ ಎಸ್ ಎಸ್ ಸಂಘದ ಕಟ್ಟಾಳಾಗಿರುವ ಇವರಿಗೆ ಸಂಘದ ಬೆಂಬಲವಿದೆ ಈಗಾಗಲೇ ಹಲವಾರ ಜೊತೆಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಬಂದಿದೆ,ಬಿಜೆಪಿ ಅಭ್ಯರ್ಥಿಯಾಗಿ ಬರುವ ಎಲ್ಲಾ ಲಕ್ಷಣಗಳಿವೆ ಎಂದು ಡಿ ಬಿ ನಾಯಕ ಅವರು ತಿಳಿಸಿದರು.
ಜನರು ಬೇರೆ ಬೇರೆ ನಗರಕ್ಕೆ ಕೂಲಿ ಮಾಡಲು ಗುಳೆ ಹೋಗುವುದನ್ನು ತಪ್ಪಿಸಲು,ಕೈಗಾರಿಕೋದ್ಯಮಕ್ಕೆ ಒತ್ತು ಕೊಡುತ್ತಾರೆ, ಹಾಗೂ ಗಡಿ ಭಾಗದಲ್ಲಿರುವು ಹಳ್ಳಿಗಳಿಗೆ ಇಷ್ಟು ದಿನ ಅನ್ಯಾಯವಾಗುತ್ತಿದ್ದು ಅದನ್ನು ತಡೆಗಟ್ಟಲು ಸೂಕ್ತ ನಿರ್ಧಾರ ತೆಗೆದುಕೊಂಡು ಅವರಿಗೆ ಉಪಯೋಗವಾಗುವ ಕೃಷ್ಣ, ಬಸವಸಾಗರನ ಡ್ಯಾಮ್ ನ ನೀರನ್ನು ಹೆಚ್ಚುವರಿಯಾಗಿ ಪಡೆದು ಕ್ಷೇತ್ರದ ಜನತೆಗೆ ಉಪಯೋಗವಾಗುವ ಕಾರ್ಯ ಮಾಡುವ ಹುಮ್ಮಸಿನಲ್ಲಿದ್ದಾರೆ,ಅವರು ಬಂದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಹಿರಿಯ ಮುಖಂಡರಿಗೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ನುಂಗಲಾಗದ, ಉಗುಳಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ,ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕಟೀಲ್ ಅವರು ಲಿಂಗಸೂಗೂರು ಕ್ಷೇತ್ರಕ್ಕೆ ದಿ.೨೫ರಂದು ಆಗಮಿಸಲಿದ್ದಾರೆ,ಅಂದು ಎಲ್ಲಾ ಆಕಾಂಕ್ಷಿ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಬಹುದು ಎನ್ನಲ್ಲಾಗಿದೆ, ಲಿಂಗಸೂಗೂರು ಕ್ಷೇತ್ರದ ಜನತೆ ಯಾರಿಗೆ ಬಿಜೆಪಿ ಟಿಕೆಟ್ ನೀಡುತ್ತಾರೆ ಎನ್ನುವ ಕುತೂಹಲದಲ್ಲಿ ಇರುವುದು ಸುಳ್ಳಲ್ಲ..