ನೀವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ

ಆನೇಕಲ್, ಜು.೨೨:ತಾಲ್ಲೂಕಿನ ಹುಲಿಮಂಗಲ ಗ್ರಾಮ ಪಂಚಾಯಿತಿ ವಾಪ್ತಿಯ ಶಿಕಾರಿಪಾಳ್ಯ ಗ್ರಾಮದ ಸರ್ವೇ ನಂಬರ್ ೧೫೫ ಮತ್ತು ೧೫೬ ರ ಸರ್ಕಾರಿ ಭೂಮಿಯಲ್ಲಿ ಬಡ ಕುಟುಂಬಗಳಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಿಪಬ್ಲಿಕನ್ ಸೇನೆಯ ಪದಾದಿಕಾರಿಗಳು ಆನೇಕಲ್ ನಗರದಲ್ಲಿರುವ ಪ್ರವಾಸಿ ಮಂದಿರದಿಂದ ಆನೇಕಲ್ ತಾಲ್ಲೂಕು ಪಂಚಾಯಿತಿ ಕಚೇರಿ ವರೆಗೆ ಕಾಲ್ನಡಿಗೆ ಜಾಥ ನಡೆಸಿದರು ಜೊತೆಗೆ ಬಡ ಕುಟುಂಬಗಳಿಗೆ ನಿವೇಶನ ನೀಡಿದ ಅದಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದಿಕ್ಕಾರಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆಯ ನಟರಾಜ್, ನಾಗರಾಜ್ ರೆಡ್ಡಿ, ಪ್ರಭಾ ಶೆಟ್ಟಿ, ಮುನಿರಾಜು, ಹಾರಗದ್ದೆ ವಿಜಿ, ಕೆ.ಕೆ.ಮುನಿಚೌಡಪ್ಪ, ದೇವರಾಜು, ದೊಡ್ಡಹಾಗಡೆ ಯಲ್ಲಪ್ಪ, ಹೊಂಪಲಘಟ್ಟ ರವಿ, ಜಾಲಿ ವೆಂಕಟೇಶ್, ಸಂಪಿಗೆ ನಾಗರಾಜ್, ಕುಮಾರ್, ಅಣ್ಣಯ್ಯ, ಸಿದ್ದನಪಾಳ್ಯ ಸುರೇಶ್, ಮುರುಗೇಶ್, ನಾಗೇಶ್, ಮುನಿಯಲ್ಲಪ್ಪ, ಶ್ರೀನಿವಾಸ್, ಯಲ್ಲಪ್ಪ, ಮೇಡಹಳ್ಳಿ ರಮೇಶ್, ಸೊಳ್ಳೇಪುರ ಶಿವು, ಶೇಖ್ ಅಬ್ದುಲ್, ಶಬೀರಾ ಬಾನು, ಲಷ್ಮೀ ಮತ್ತಿತರು ಹಾಜರಿದ್ದರು.