ನೀವೂ ಏನ್ ಮಾಡ್ತಿರೋ ಗೊತ್ತಿಲ್ಲ ರೈತರ ಬೆಳೆಗೆ ನೀರು ಕೊಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.06: ಸಿಎಂ ಮತ್ತು ಡಿಸಿಎಂ ಬೇರೆ, ಬೇರೆ ಕೆಲಸಗಳಲ್ಲಿ ತಿಡಗಿದ್ದಾರೆ. ಅವರು ಈ ಭಾಗದ ರೈತರ ಸಂಕಷ್ಟ ಅರಿತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರು. ರೈತರು ಸಂಕಷ್ಟದಲ್ಲಿದ್ದಾಗ ನೀರು ಎಲ್ಲಿಂದ ಬಿಡಬೇಕು ಎಂಬುದನ್ನು ಮಾಡಬೇಕು. ಇದು ವಿರೋದ ಪಕ್ಷದ ಕೆಲಸ ಅಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು.  ನೀರು ಬಿಡುಗಡೆ ಕುರಿತು ಇಂದು ಮಧ್ಯಾಹ್ನ ಸಚಿವ ನಾಗೇಂದ್ರ, ಡಿಸಿ ಬಳಿ ಮಾತನಾಡುವೆಂದರು.
ಬರಗಾಲ ಕುರಿತು ಸರಿಯಾದ ಸರ್ವೇ ವರದಿ ಕಳಿಸಿಲ್ಲ. ಪರಿಹಾರಕ್ಕಾಗಿ ಕೇವಲ ಒಂದಿಷ್ಟು ಹಣ ಬಿಡುಗಡೆ ಮಾಡಿ ಈಗ ರೈತರಿಂದ ಪರಿಹಾರಕ್ಕೆ ಅರ್ಜಿ ಕರೆಯುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರದದ ಕಡೆ ಬೆರಳು ತೋರಿಸುವುದು ಬೇಡ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಕನಿಷ್ಟ ಜಿಲ್ಲಾ ಪ್ರವಾಸವನ್ನು ಸಹ ಮಾಡಿ ಬರಗಾಲ ಪರಿಶೀಲಿಸಿಲ್ಲ. ರೈತರನ್ನು ಸಮಾ್ದಾನ ಮಾಡುವ ಕೆಲಸ ಸಹ ಮಾಡಿಲ್ಲ. ಸಿಎಂ ಹೇಳಿದಂತೆ ಮಾಡಿ ಎಂದರು.
ಕಾರ್ಖಾನೆಗೆ ಬಿಡಿ ರೈತರಿಗೆ ಕೊಡಿ:
ತುಂಗಭದ್ರ ಜಲಾಶಯದಲ್ಲಿ ಇರುವ ನೀರಿನಲ್ಲಿ ಜಿಂದಾಲ್ ಗೆ ಒಂದುವರೆ ಟಿಎಂಸಿ ನೀರು ತೆಗೆದಿರಿಸಿದೆ. ಉಳಿದ ಕಾರ್ಖಾನೆಗಳಿಗೆ ಸಹ ತೆಗೆದಿರಿಸಿದ್ದು. ಈ ನೀರನ್ನು
ರೈತರ ಬೆಳೆ ಸಂಕಷ್ಟ ನಿವಾರಣೆಗಾಗಿ ನೀಡಬೇಕು. ಜನತೆ, ಬೆಳೆಯ ರಕ್ಣಣೆ ಮುಖ್ಯ ಕಾರ್ಖಾನೆಗಲ್ಲ ಎಂದು ಈಶ್ವರಪ್ಪ ಹೇಳಿದರು.
ತನಿಖೆಯಾಗಲಿ:
ಬೆಂಗಳೂರು ಅಭಿವೃದ್ಧಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಹ್ಲಾದ್ ಮೂಲಕ ಕಮೀಷನ್ ವಸೂಲಿ ಮಾಡಿ ನೀಡುತ್ತದೆಂದು  ಕೆಂಪಯ್ಯ ಹೇಳಿದ್ದಾರೆ. ಹಾಗಿದ್ದರೆ ಪ್ರಹ್ಲಾದ್ ಮತ್ತು
ಕೆಂಪಯ್ಯ ಅವರ ಮೇಲೆ ಕೇಸು ದಾಖಲಿಸಿ ತನಿಖೆ ಮಾಡಿಸಿ ಎಂದು ಸಿಎಂ ಅವರಿಗೆ ಆಗ್ರಹಿಸಿದರು.
ಆಪರೇಷನ್ ಕಾಂಗ್ರೆಸ್ ಸಾಧ್ಯವಿಲ್ಲ:
ಬಿಜೆಪಿಯಿಂದ ಒಬ್ಬ ಶಾಸಕರನ್ನು ಆಪರೇಷನ್ ಮಾಡಲು ಸಾಧ್ಯವಿಲ್ಲ. ಅವರೇನೆ ಪ್ರಯತ್ನ ಮಾಡಿದರೂ ಆಗದ ಕೆಲಸ ಎಂದರು. ಕಾಂಗ್ರೆಸ್ ಪಕ್ಷವೇ ಹಾದಿ ಬೀದಿಗೆ ಬಂದಿದೆ. ಅದು ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದರು.
ನಾನು ದಡ್ಡ , ಸುಳ್ಳುಗಾರ ಅಲ್ಲ:
ನಾನು ಸಿದ್ದರಾಮಯ್ಯ ಹೇಳಿದಂತೆ ಶತದಡ್ಡ ಇರ ಬಹುದು. ಆದರೆ ಅವರಂತೆ ಬರೀ ಸುಳ್ಳುಗಾರ ಅಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ಬಸವರಾಜ್ ದಡೆಸೂಗೂರು, ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಗುತ್ತುಗನೂರು ವಿರೂಪಾಕ್ಷಗೌಡ, ಗೋನಾಳ್ ಮುರಹರಗೌಡ,  ಅನಿಲ್ ಮೋಕಾ ಇದ್ದರು.