
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಕಾಂಗ್ರೆಸ್ ನವರು ಮುಂಬರುವ ಚುನಾವಣೆಗೆ ಗ್ಯಾರೆಂಟಿ, ಗ್ಯಾರೆಂಟಿ ಎಂದು ಓಡಾಡುತ್ತಿದ್ದಾರೆ. ನಾವು ಹೇಳುವುದು ನೀವು ಮನೆಗೋಗುವುದು ಗ್ಯಾರೆಂಟಿ ಎಂದು. ಯಾಕೆ ಎಂದರೆ ನಾವು ಈಗಾಗಲೇ ಜನರಿಗೆ ಅನೇಕ ಯೋಜನೆಗಳ ಮೂಲಕ ಗ್ಯಾರೆಂಟಿ ನೀಡಿದ್ದೇವೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ಅವರು ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈವರೆಗೆ ದೇಶದಲ್ಲಿ ಮೂರು ಕೋಟಿ ಮನೆಗಳಲ್ಲಿ ನಳ ನೀರಿನ ಸಂಪರ್ಕ ಇತ್ತು. ಕೇವಲ ಎಂಟು ವರ್ಷಗಳಲ್ಲಿ
11 ಕೋಟಿ ಮನೆಗಳಿಗೆ ಶುದ್ದ ನೀರಿನ ಸಂಪರ್ಕವನ್ನು ಜಲ ಜೀವನ್ ಮಿಷನ್ ಮೂಲಕ ನೀಡಿದೆ. ಬರುವ ಮತ್ತೊಂದು ವರ್ಷದಲ್ಲಿ ನಾಲ್ಕು ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಿದೆಂದು ಹೇಳಿದರು.
ಒಂದು ಕೋಟಿ 37 ಲಕ್ಷ ಮನೆಗಳನ್ನು ನಿರ್ಮಸಿದೆ. ರಸ್ತೆ ಬದಿ ವ್ಯಾಪಾರಿಗಳಿಗೆ ಸಹಕಾರ ಮಾಡಿದೆ. ರೈತರಿಗೆ ರೈತ ಸಂಜೀವಿನಿ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಜನಾಭಿವೃದ್ದಿ ಮಾಡಿದೆಂದರು.
ಕಾಂಗ್ರೆಸ್ ನವರು ನೀಡುವ ಗ್ಯಾರೆಂಟಿಗಳೆಲ್ಲ ಸುಳ್ಳು
ಛತ್ತೀಶ್ ಗಡದಲ್ಲಿ ನೀಡಿದ ಭರವಶೆ ಈವರಗೆ ಏಕೆ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು. ಆದರೆ ಈವರಗೆ ಮಾಡಿಲ್ಲ. ಅದಕ್ಕಾಗಿ ಅವರನ್ನು ಮನೆಗೆ ಕಳಿಸುವ ಗ್ಯಾರೆಂಟಿಯನ್ನು ಜನಮಾಡಿ.
ಪ್ರಹ್ಲಾದ್ ಜೋಷಿ
ಕೇಂದ್ರ ಸಂಸದೀಯ ಸಚಿವರು.