ನೀಲೂರು ದರ್ಗಾಕ್ಕೆ ಹರಕೆಯ ಪಾದಯಾತ್ರೆ

ಕಲಬುರಗಿ,ಮೇ 30:ಅಲ್ಲಮಪ್ರಭು ಪಾಟೀಲ್ ಅವರು ಶಾಸಕರಾಗಿ ಆಯ್ಕೆಯಾದರೆ ನೀಲೂರು ದರ್ಗಾಕ್ಕೆ ಪಾದಯಾತ್ರೆ ಕೈಗೊಳ್ಳುವದಾಗಿ ಹರಕೆ ಹೊತ್ತಿದ್ದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಕ್ ಸಮರಿನ್ ಇಂದು ಪಾದಯಾತ್ರೆ ಆರಂಭಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್, ಮಹಾನಗರ ಪಾಲಿಕೆ ಸದಸ್ಯ ಶೇಕ್ ಹುಸೇನ್, ಅಸ್ಲಾಂ ಬಾಜೆ, ಅಲ್ಪಸಂಖ್ಯಾತರ ಉಪಾಧ್ಯಕ್ಷ ರಜಾಕ ಚೌದರಿ ,ಮಹಿಳಾ ಉಪಾಧ್ಯಕ್ಷೆ ಸೈರಾಬಾನು , ಯುವ ಅಧ್ಯಕ್ಷ ಅಸ್ಲಾಂ ಸಿಂದಗಿ, ಶಿವಾನಂದ್ ತೊರವಿ ,ತುಕಾರಾ0, ಖಾಲಿದಾ ಬಾನು, ರಿಯಾಜ್ ಪಟೇಲ್, ಅಲಿ ಚಾಉಶ್, ಶೇಕ್ ಫಾತಿಮಾ ಮೋದಿನ್ ಪಟೇಲ್ ಅಣಬಿ ಸೇರಿದಂತೆ ಹಲವರಿದ್ದರು.