ನೀಲಿ ತಿಲಕ ನೀಲಿ ಶಾಲು ಧರಿಸದ ಶಿಕ್ಷಕನ ಅಮಾನತ್ತಿಗೆ ಆಗ್ರಹ

ಬಸವನಬಾಗೇವಾಡಿ:ಫೆ.16: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ನೀಲಿ ತಿಲಕ ನೀಲಿ ಶಾಲ ಧರಿಸಲು ನಿರಾಕರಿಸಿದ ಶಿಕ್ಷಕ ಶಿವಾನಂದ ಕೆಳಗಿನಮನಿ ಅವನನ್ನು ವೃತ್ತಿಯಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕಾರ್ನಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಕಾರ್ಯಕರ್ತರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗುರು ಗುಡಿಮನಿ ತಾಲೂಕಾ ಸಂಚಾಲಕ ಯಮನೂರಿ ಚಲವಾದಿ ಮಾತನಾಡಿ ಸಂವಿಧಾನ ದಿನಾಚರಣೆಯ 75ನೇ ವರ್ಷದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಸ್ಥಬ್ದ ಚಿತ್ರ ಮೆರವಣಿಗೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುತ್ತಿದ್ದು ಸಾರ್ವಜನಿಕರಲ್ಲಿ ಸಂವಿಧಾನದ ಜಾಗೃತಿ ಮೂಡಿಸಲಾಗಿತ್ತು ಇಂತಹ ಸಂಧರ್ಭದಲ್ಲಿ ಮಸಿನಾಳ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಶಿವಾನಂದ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನೀಲಿ ತಿಲಕ ನೀಲಿ ಶಾಲು ಧರಿಸಲು ನಿರಾಕರಿಸುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾನೆ,

ನೀಲಿ ತಿಲಕ ನೀಲಿ ಶಾಲು ಎನ್ನುವುದು ಡಾ, ಬಿ,ಆರ್ ಅಂಬೇಡ್ಕರ ಅವರು ಕಂಡಂತ ಸಮಾನತೆಯ ಸಂದೇಶವಾಗಿದೆ, ಆದರೆ ಶಿಕ್ಷಕ ನೀಲಿ ಬಣ್ಣಕ್ಕೆ ಅಗೌರವ ತೋರಿರುವುದು ಜಾತಿ ನಿಂಧನೆ ಮಾಡಿದಂತಾಗಿದೆ ಈ ನಿಟ್ಟಿನಲ್ಲಿ ನಾಳೆ ಮದ್ಯಾಹ್ನ 3 ಗಂಟೆಯೊಳಗೆ ಶಿಕ್ಷಕನನ್ನು ವೃತ್ತಿಯಿಂದ ವಜಾಗೊಳಿಸಬೇಕು ಇಲ್ಲವಾದರೆ ಬಿಇಒ ಕಚೇರಿ ಮುಂದೆ ಧರಣಿ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ: ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಅಗೌರವ ತೋರಿದ ಶಿಕ್ಷಕನಿಗೆ ಕಾರಣ ನೀಡುವಂತೆ ಷೋಕಾಸ್ ನೋಟಿಸ್ ನೀಡಲಾಗಿದೆ, ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರದಲ್ಲಿಯೇ ಸೂಕ್ತ ಕಾನೂನು ಕ್ರಮ ಜರಗಿಸಲಾಗುವದು.
ಈ ಸಂಧರ್ಭದಲ್ಲಿ ಮುಖಂಡರಾದ ವಿದ್ಯಾಧರ ದೊಡಮನಿ, ಬಸವರಾಜ ದೊಡಮನಿ, ಯಲ್ಲಪ್ಪ ಪಡಸಲಗಿ, ಗಂಗಾಧರ ಆರೇರ್, ಚಂದ್ರಶೇಖರ ನಾಲತವಾಡ, ಯಲ್ಲ್ಪ ಕಣಕಾಲ, ಶರಣಪ್ಪ ನಾಲತವಾಡ, ಚಂದ್ರಶೇಖರ ನಡಗೇರಿ, ಸೇರಿದಂತೆ ಮುಂತಾದವರು ಇದ್ದರು.