ನೀಲಿ ಚಿತ್ರದಲ್ಲಿ ನಟಿಸ್ತೀರಾ ಎಂದು ನಟಿಗೆ ಯೂಟ್ಯೂಬರ್ ಪಶ್ನೆ: ಆಕ್ರೋಶ

ಬೆಂಗಳೂರು, ಏ ೨- ಸದ್ಯದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪೆಂಟಗನ್ ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರದ ನಟಿ ತನಿಷಾ ಕುಪ್ಪಂಡ ಅವರಿಗೆ ಯುಟ್ಯೂಬರ್ ಒಬ್ಬರು ಕೇಳಿದ ಪ್ರಶ್ನೆಯಿಂದ ಮುಜಗರಗೊಂಡ ಘಟನೆ ನಡೆದಿದೆ. ಅಲ್ಲದೇ ನಟಿ ಯೂಟ್ಯೂಬರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಯುಟ್ಯೂಬರ್ ಒಬ್ಬರು ತನಿಷಾ ಅವರನ್ನು ಸಂದರ್ಶನ ಮಾಡುವ ಸಂದರ್ಭದಲ್ಲಿ ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾರೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ. ಏಪ್ರಿಲ್ ೭ರಂದು ತನಿಷಾ ನಟನೆಯ ಪೆಂಟಗನ್ ಸಿನಿಮಾ ರಿಲೀಸ್ ಆಗುತ್ತಿದ್ದು ನಟಿಯ ಇಂಟರ್ವೀವ್ ಮಾಡಲು ಬಂದಿದ್ದ ಯೂಟ್ಯೂಬರ್‌ಈ ರೀತಿ ಪ್ರಶ್ನೆ ಕೇಳಿ ಪೇಜೆಗೆ ಸಿಲುಕಿದ್ದಾರೆ. ಈ ವೇಳೆ ನಟಿ ಗರಂ ಆಗಿದ್ದು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೋರ್ನ್ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದ ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ತನಿಷಾಗೆ ಬೆತ್ತಲೆ ಸಿನಿಮಾ ಮಾಡ್ತೀರಾ ಅಂತ ಯೂಟ್ಯೂಬರ್‌ಕೇಳಿದ್ದು ಅನೇಕರನ್ನು ಕೆರಳಿಸಿದೆ. ಈ ವೇಳೆ ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್‌ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ನಟಿಗೆ ಅಸಂಬದ್ಧ ಪ್ರಶ್ನೆ ಕೇಳಿದ ಯೂಟ್ಯೂಬರ್ ಸುಶಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಂಟಗನ್ ಸಿನಿಮಾದಲ್ಲಿ ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ತನಿಷಾ ಕುಪ್ಪಂಡ ನಟಿಸಿದ್ದು ಚಿತ್ರದಲ್ಲಿ ಸಖತ್ ಹಾಟ್‌ಹಾಗೂ ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.