ನೀಲವಂಜಿ ಗ್ರಾಮದಲ್ಲಿ ಆಹಾರ ಪೂರೈಕೆ

ದೇವದುರ್ಗ.ಜೂ.೨-ಪಟ್ಟಣದ ಶಾಸಕ ಗೃಹ ಕಚೇರಿಯಲ್ಲಿ ಆರಂಭಿಸಿರುವ ಕೆಎಸ್‌ಎನ್ ಅನ್ನದಾಸೋಹ ಕೇಂದ್ರದಿಂದ ಮಂಗಳವಾರ ತಾಲೂಕಿನ ನೀಲವಂಜಿ ಹಾಗೂ ನವಿಲುಗಡ್ಡ ಗ್ರಾಮದಲ್ಲಿ ಆಹಾರದ ಪ್ಯಾಕೇಟ್ ವಿತರಿಸಲಾಯಿತು.
ಮುಖಂಡ ಶಿವಕುಮಾರ ಪಾಣಿ ಸಾಹುಕಾರ ಮಾತನಾಡಿ, ಕರೊನಾ ತಡೆಗೆ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಾಸ್ಕ್ ಧರಿಸಿ, ಸಾನಿಟೈಸರ್ ಬಳಸಬೇಕು. ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ದುಡಿಯಲು ಕೆಲಸ ಇಲ್ಲದೆ ಸಂಕಷ್ಟ ಎದುರಿಸುವವರು ಕೆಎಸ್‌ಎನ್ ಬಳಗ ಕಾರ್ಯಕರ್ತರಿಗೆ ಫೋನ್ ಮಾಡಿ ತಿಳಿಸಿದರೆ, ನೀವಿರುವ ಸ್ಥಳಕ್ಕೆ ಬಂದು ಊಟ, ಕುಡಿವ ನೀರು, ಮಾಸ್ಕ್ ವಿತರಣೆ ಮಾಡಲಾಗುವುದು ಎಂದರು.
ಸ್ವಯಂ ಸೇವಕರಾದ ಚಂದಪ್ಪ ಬುದ್ದಿನ್ನಿ, ರಂಗನಾಥ ಮಕಾಶಿ, ದೇವಿಂದ್ರಪ್ಪಗೌಡ, ನರಸಣ್ಣ ನೀಲವಂಜಿ, ಭಾಗಪ್ಪ ಇತರರಿದ್ದರು.