ನೀಲಮ್ಮ ಗೌಡಶಾನಿ ಪುತ್ಥಳಿ ನಿರ್ಮಾಣಕ್ಕೆ ಮುಸ್ಲಿಂರಿಂದ ೩೪ ಸಾವಿರ ದೇಣಿಗೆ

ಸಿರವಾರ.ಜು.೨೫- ದೇಶ- ವಿದೇಶದ ವಿವಿಧ ಭಾಗಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪ್ರತಿಭಾವಂತರವನ್ನು ಕೊಡುಗೆಯಾಗಿ ನೀಡಿದ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿಗೆ ಜಮೀನನ್ನು ದಾನವಾಗಿ ನೀಡಿರುವ ನೀಲಮ್ಮ ಗೌಡಶಾನಿ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಈಗಾಗಲೇ ದೇಣಿಗೆ ನೀಡಿದ್ದಾರೆ.
ಅವರ ಸಾಲಿಗೆ ಮುಸ್ಲಿಂ ಬಾಂಧವರು ಸಹ ೩೭,೪೦೦ ನೀಡುವ ಮೂಲಕ ನೇರವಾಗಿದ್ದಾರೆ ಎಂದು ಹಳೆ ವಿದ್ಯಾರ್ಥಿ ಪುತ್ಥಳಿ ನಿರ್ಮಾಣದ ರೂವಾರಿಗಳಲ್ಲಿ ಒಬ್ಬರಾದ ಟಿ.ಬಸವರಾಜ ಹೇಳಿದರು. ಪಟ್ಟಣದ ಬಾಲಕರ ಪ್ರೌಢಶಾಲೆ,ಸರ್ಕಾರಿ ಪದವಿ ಪೂರ್ವ ಕಾಲೇಜು,ಸರ್ಕಾರಿ ಪದವಿ ಕಾಲೇಜು, ಮುಸ್ಲಿಂರು ಹಬ್ಬಗಳಲ್ಲಿ ನಮಾಜ್ ಮಾಡುವ ಈದ್ಗಾ ಮೈದಾನ, ಖಬರಸ್ತಾನ ಇವುಗಳಿಗೆ ಉಚಿತವಾಗಿ ಜಮೀನು ನೀಡಿರುವ ನೀಲಮ್ಮ ಗೌಡಶಾನಿ ಕಂಚಿನ ಪುತ್ತಳಿಯನ್ನು ಪ್ರೌಢಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ಕೂಡಿಕೊಂಡ ದೇಣಿಗೆ ಸಂಗ್ರಹಿಸಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತು.
ಅದಕ್ಕಾಗಿ ಪಟ್ಟಣದ ಸಹಕಾರಿ ಸಂಘಗಳು, ಖಾಸಗಿ ಶಾಲೆಗಳ ಒಕ್ಕೂಟದಿಂದ ಹಳೇ ವಿದ್ಯಾರ್ಥಿಗಳಿಂದ ದೇಣಿಗೆ ನೀಡಲಾಗಿದೆ. ಅವರ ಕುಟುಂಬಸ್ಥರಾದ ಅಶೋಕಪಾಟೀಲ್ ಸಹ ೧೫.ಸಾವಿರ ದೇಣಿಗೆ ನೀಡಿದ್ದಾರೆ. ಈಗಿರುವ ಜಮೀನು ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಕೋಟಿಗಟ್ಟಲೇ ಬಾಳುತ್ತದೆ ಅಂತಹ ಜಮೀನು ಎಲ್ಲಾರ ಒಳತಿಗಾಗಿ ನೀಡುವ ಅವರಿಗೆ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವ ಜೊತೆಗೆ ಮುಂದಿನ ಪಿಳಿಗೆಗೆ ಇದು ತಿಳಿಯುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಬಾಲಕ ಪ್ರೌಢಶಾಲೆಯ ಪ್ರಾಚಾರ್ಯ ಸುರೇಶ ಡಿ,ಬಯ್ಯಾಪೂರ ಕಾಲೇಜಿನ ಪ್ರಚಾರ್ಯ ಅಮರೇಶ ನಂದರೇಡ್ಡಿ, ಪ್ರಕಾಶ ಪಾಟೀಲ್, ವೆಂಕರೇಡ್ಡಿ ಬಲ್ಕಲ್, ಡಿ.ಯಮನೂರು, ಪತ್ರಕರ್ತರು, ಮುಸ್ಲಿಂ ಸಮುದಾಯದ ಯುವಕರು ಇದ್ದರು.