ನೀಲಗಲ್- ಬೇಡ ಜಂಗಮ ಗ್ರಾಮ ಘಟಕ ರಚನೆ

ಸಿರವಾರ,ನ.೨೦-ಬೇಡ ಜಂಗಮ ಸಮಾಜದ ನಿಲೋಗಲ್ ಗ್ರಾಮ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೀಲಗಲ್ ಬೃಹನ್ಮಠದಲ್ಲಿ ಸಭೆ ಸೇರಿ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಶಾಂತಕುಮಾರ,ಅಧ್ಯಕ್ಷರಾಗಿ ಶಿವರಾಜಯ್ಯ, ಉಪಾಧ್ಯಕ್ಷರಾಗಿ ರಾಚೋಟಯ್ಯ ಸ್ವಾಮಿ, ಸಹ ಉಪಾಧ್ಯಕ್ಷರಾಗಿ ಜಯಪ್ಪ ಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಗುರುನಾಥ ಸ್ವಾಮಿ,ಖಜಾಂಚಿ ಯಾಗಿ ಅದಯ್ಯ ಸ್ವಾಮಿ, ಕಾರ್ಯದರ್ಶಿಯಾಗಿ ಶಿವಮೂರ್ತಿ ಸ್ವಾಮಿ,ಜಂಟಿ ಕಾರ್ಯದರ್ಶಿಯಾಗಿ ಅಂಬಯ್ಯಾ ಸ್ವಾಮಿ,ಸಂಘಟನ ಕಾರ್ಯದರ್ಶಿಯಾಗಿ ರೇವಣಸಿದ್ದಯ್ಯ ಸ್ವಾಮಿ, ಸಮಾಜದ ಬಾಂಧವರು ಸರ್ವಾನುಮತದಿಂದ ಆಯ್ಕೆಮಾಡಿದರು. ನಂತರ ಸಮಾಜದ ಕಡೆಯಿಂದ ಸನ್ಮಾನಿಸಿಲಾಯಿತು.
ಈ ಸಂದರ್ಭದಲ್ಲಿ ಅಮರಯ್ಯ ಸ್ವಾಮಿ,ವಿಶ್ವನಾಥ ಸ್ವಾಮಿ, ಶಿವಶರಣ ಸ್ವಾಮಿ, ಶರಣಯ್ಯ ಸ್ವಾಮಿ ಬೀಲಯಿ,ಶಾಂತಯ್ಯ ಸ್ವಾಮಿ,ಸೂಗೂರಯ್ಯ ಸ್ವಾಮಿ ಅರ್ಚಕರು, ನಾಗಲಿಂಗಯ್ಯಸ್ವಾಮಿ, ಶಿವಲಿಂಗಯ್ಯ ಸ್ವಾಮಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.