ನೀಲಕಂಠರಾವ ಮೂಲಗೆಗೆ ಕೋವಿಡ್ ಪಾಸಿಟೀವ್

ಕಲಬುರಗಿ,ಏ.19- ಕಲಬುರ್ಗಿ ದಕ್ಷಿಣ ಮತಕ್ಷೇತ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನೀಲಕಂಠರಾವ ಮೂಲಗೆ ಅವರಿಗೆ ಕೋವಿಡ್- 19 ಪರೀಕ್ಷೆಯ ವರದಿ ಪಾಸಿಟೀವ್ ಬಂದಿದ್ದು, ಕೆಲ ದಿನಗಳ ಹಿಂದೆ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಜಾಗೃತಿ ವಹಿಸುವುದು ಅವಶ್ಯಕವಾಗಿದೆ ಎಂದಿರುವ ನೀಲಕಂಠರಾವ ಮೂಲಗೆ ಅವರು, ತಪ್ಪದೇ ಮಾಸ್ಕ ಹಾಕಿ ಕೋಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸಾನಿಟೈಸರ ಬಳಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮನವಿ ಮಾಡಿದ್ದಾರೆ.