ನೀಲಕಂಠನಗರ ಘಟನೆ: ಶಾಂತಿ ಸಭೆ

ನಂಜನಗೂಡು: ಜೂ.07:- ನೀಲಕಂಠನಗರ ಬಡಾವಣೆಯಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪೆÇಲೀಸ್ ಸಭಾಭವನದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಬಡಾವಣೆಯ ನಿವಾಸಿ ಅನಂತ್ ಬಡಾವಣೆಯಲ್ಲಿ ದ್ವಿಚಕ್ರವಾಹನಗಳನ್ನು ವಿಲ್ಹಿಂಗ್ ಮಾಡುತ್ತಾ ಹೆಣ್ಣು ಮಕ್ಕಳನ್ನು ಚುಡಾಯಿಸುವ ಕೃತ್ಯಗಳು ನಡೆಯುತ್ತಿವೆ, ಕಳ್ಳತನ ಹೆಚ್ಚಾಗುತ್ತಿದೆ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕರ ಮೇಲೆ ದಾಳಿ ನಡೆಸಿ, ಒಬ್ಬನನ್ನು ಚೂರಿಯಿಂದ ಇರಿಯಲಾಗಿದೆ. ಬಡಾವಣೆಯಲ್ಲಿ ಹೊರರಾಜ್ಯದವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಕೆಲ ತಿಂಗಳ ಹಿಂದೆ ಮುಸ್ಲಿಂ ಯುವಕನೊಬ್ಬ ಆಕಸ್ಮಿಕವಾಗಿ ನದಿಗೆ ಬಿದ್ದು ತೀರಿಕೊಂಡಾಗ ನನ್ನ ಮೇಲೆ ದೂರು ನೀಡಿ ತೊಂದರೆ ಕೊಟ್ಟಿದ್ದಾರೆ. ಬಡಾವಣೆಯಲ್ಲಿ ಆಳವಡಿಸಲಾಗಿರುವ ಸಿಸಿ ಕ್ಯಾಮಾರಾಗಳು ಕೆಟ್ಟಿವೆ, ಪೆÇಲೀಸ್ ಗಸ್ತು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಬಾಲಚಂದ್ರ ಮಾತನಾಡಿ ಉದ್ದೇಶ ಪೂರ್ವಕವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ಪೆÇಲೀಸರು ಬಂಧಿಸಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಹೇಳಿದರು.
ಅಬ್ದುಲ್ ಖಾದರ್ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಪ್ರಚಾರ ನಡೆಯುತ್ತಿದೆ, ನಂಜನಗೂಡಿನಲ್ಲಿ ಎರಡು ಕೋಮಿನ ಜನ ಅಣ್ಣತಮ್ಮಂದಿರಂತೆ ಬಾಳಿದ್ದೇವೆ, ಕೆಲವು ಕಿಡಿಗೇಡಿಗಳಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ ಪೆÇಲೀಸರು ಕ್ರಮವಹಿಸಬೇಕು ಎಂದು ಹೇಳಿದರು.
ಕಿರಣ್ ಮಾತನಾಡಿ ಶ್ರೀಕಂಠೇಶ್ವರನಿಗೆ ಹರಕೆ ಬಿಟ್ಟ ಗೂಳಿಗಳನ್ನು ರಾತ್ರಿ ವೇಳೆ ಅಪಹರಿಸಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ, ನೀಲಕಂಠ ನಗರ ಬಡಾವಣೆಯ ಮುಸ್ಲಿಂ ಸಮುದಾಯಕ್ಕೆಸೇರಿದ ಕೆಲವು ಯುವಕರು ಲಾಂಗ್ ಗಳನ್ನು ಹಿಡಿದು ಹೊರಡುತ್ತಿರುವ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ. ಕ್ರಮವಹಿಸಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಶಂಕರಪುರ ಸುರೇಶ್ ಮಾತನಾಡಿ ನೀಲಕಂಠನಗರ ಬಡಾವಣೆ ಸೂಕ್ಷ್ಮ ಪ್ರದೇಶ, ಬಡಾವಣೆಯಲ್ಲಿ ಪೆÇಲೀಸ್ ಗಸ್ತು ಹೆಚ್ಚಿಸಬೇಕು, ಹೊರರಾಜ್ಯದವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಪೆÇಲೀಸರು ಸಿ.ಸಿ. ಟಿವಿ ಅಳವಡಿಸಿ ಗಮನಿಸಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಮಾತನಾಡಿ ನೀಲಕಂಠ ನಗರ ಬಡಾವಣೆಯಲ್ಲಿ ಕಳೆದ 3 ವರ್ಷಗಳಿಂದ ಯಾವುದೇ ಗಲಾಟೆ ನಡೆದಿರಲಿಲ್ಲ,ಮೈಸೂರು ಜಿಲ್ಲೆ ಐತಿಹಾಸಿಕ ನಗರ, ಈ ಜಿಲ್ಲೆಯ ನಿವಾಸಿಗಳಾದ ನೀವು ಪುಣ್ಯವಂತರು, ಕ್ಷುಲ್ಲಕ ಕಾರಣಗಳಿಗಾಗಿ ಯುವಕರು ಗಲಭೆಗಳಲ್ಲಿ ಪಾಲುಗೊಂಡು ಮುಂದಿನ ಭವಿಷ್ಯ ಹಾಳುಮಾಡಿಕೊಳ್ಳಬೇಡಿ,ಇಲ್ಲಿನ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ಅಕ್ರಮ ಚಟುವಟಿಕೆ,ಗಲಾಟೆ ,ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರ ವಿರುದ್ದ ಯಾಕಾನೂನು ಕ್ರಮವಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ.ಗೋವಿಂದರಾಜು, ತಹಶೀಲ್ದಾರ್ ಶಿವಕುಮಾರ್ ಉಪಸ್ಥಿತರಿದ್ದರು.