ನೀರೊದ್ಯೋಗಿ ವಿದ್ಯಾರ್ಥಿಗಳಿಗೆ ತರಬೇತಿಗೆ ಆಹ್ವಾನ

ಲಿಂಗಸುಗೂರ,ಜೂ.೦೮-
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಿಂಗಸುಗೂರಿನ ಜಿ.ಟಿ.ಟಿ.ಸಿ. ಕಾಲೇಜ ಪ್ರಾಂಶುಪಾಲರಾದ ರಾಜಕುಮಾರ ಅವರು ಕೌಶಲ್ಯಾಭಿವೃದ್ಧಿ ಉದ್ಯೆಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಯೋಜಕತ್ವದ ತಂತ್ರಜ್ಞಾನ ತರಬೇತಿ ಸಂಸ್ಥೆಗಳಿಗೆ ನೆರೆವು ಯೋಜನೆಯಡಿಯಲ್ಲಿ ಹಿಂದುಳಿದ ವರ್ಗ ಹಾಗೂ ಎಸ್.ಸಿ. ಎಸ್.ಟಿ. ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವರ್ಗದವರಿಗೆ ೨ ತಿಂಗಳ ಕೋರ್ಸಿನಿಂದ ಹಿಡಿದು ೨ ವರ್ಷದ ಕೋರ್ಸ್‌ವರೆಗೆ ಉಚಿತ ತರಬೇತಿಯನ್ನು ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ೨೫೦೦ ರೂಪಾಯಿಗಳನ್ನು ಶಿಷ್ಯ ವೇತನವನ್ನು ಹಾಗೂ ಕೋರ್ಸ ಮುಗಿದ ನಂತರ ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ.
ಯಾಕೆಂದರೆ ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಅಥವಾ ಕಂಪನಿಗಳಲ್ಲಿ ಉದ್ಯೋಗ ದೊರೆಕಿಸಿಕೊಡುವ ನಿಟ್ಟಿನಲ್ಲಿ ಪ್ಲೇಸ್‌ಮೆಂಟ್ ಕೊಡಲಾಗುವುದು ಎಂದು ಕೊಡಲೇ ಲಿಂಗಸುಗೂರ ತಾಲ್ಲೂಕಿನ ನೀರೊದ್ಯೋಗ ಯುವಕ ಯುವತಿಯರು ೧೮ ರಿಂದ ೩೫ ವರ್ಷದ ವಯಸ್ಸಿನವರು ತಾಂತ್ರಿಕ ತರಬೇತಿಯನ್ನು ಪಡೆದು ಸ್ವಾವಲಂಬನೆ ಜೀವನ ನೆಡೆಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಭಜಂತ್ರಿ, ಗುರುಬಸಪ್ಪ, ದತ್ತಾತ್ರೇ ಅಕ್ಷಾತಾ ಶಕುಂತಲಾ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೆಚ್ಚಿನ ವಿವರಗಳಿಗಾಗಿ ಜಿ.ಟಿ.ಟಿ.ಸಿ.ಕಾಲೇಜಿನ ಪ್ರಾಚಾರ್ಯರು: ೯೯೧೬೨೩೧೮೯೯. ೮೫೪೮೦೩೮೯೬೫, ೮೯೫೧೪೩೯೮೫೯, ೮೦೭೩೮೩೦೧೧೮ ಸಂಪರ್ಕಿಸಿರಿ.