ನೀರೆ ಶಾಂತಿ ನೀರೆ ಸಂಸ್ಕೃತಿ ನೀರೆ ಜೀವನ

ಜೇವರ್ಗಿ:ಮಾ.26 : ನೀರಿನ ಮಿತವ್ಯಯ ಬಳಕೆ ಹಾಗೂ ಅದರ ಸಂರಕ್ಷಣೆ ಮಳೆ ನೀರಿನ ಕೊಯ್ಲು ನೀರಿನ ಅಭಾವ ತಡೆಯಲು ಸದ್ಯಕ್ಕೆ ಇರುವ ಮಾರ್ಗಗಳು ಹಾಗೂ ನೀರಿನ ಮಹತ್ವ ಕುರಿತು ಜಾಥ ನಡೆಸುವುದರ ಮುಖಾಂತರ ಗ್ರಾಮಸ್ಥರಲ್ಲಿ ಕೃಷಿ ವಿಸ್ತರಣೆ ಭಾಗದ ಸಹ ಪ್ರಾಧ್ಯಾಪಕರಾದ ಡಾಕ್ಟರ್ ಸಿದ್ದರಾಮ ಬಿ ಇವರ ನೇತೃತ್ವದಲ್ಲಿ ಅರಿವು ಮೂಡುವ ಕಾರ್ಯಕ್ರಮ ಮಾಡಿದರು ವಿಶ್ವಜಲದಿನದ ನಿಮಿತ್ಯ ಗಂವ್ಹಾರ ಗ್ರಾಮದಲ್ಲಿ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ|| ಸಿದ್ರಾಮ್.ಬಿ ಈ ಜಾಥಾ ಮೂಲಕ ನೀರಿನ ಮಹತ್ವದ ಬಗ್ಗೆ ಸಾರುವ ಘೋಷಣೆ ಗಳಾದ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮಿತವಾಗಿ ಬಳಸಿದರೆ ನೀರು- ಉಳಿಯುವುದು ಆಗ ಊರು , ಪಾನಿ ಕಿ ರಕ್ಷಾ-ದೇಶ್ ಕಿ ಸುರಕ್ಷ, ನೀರು ಉಳಿಸಿ ನೆಮ್ಮದಿ ಗಳಿಸಿ, ಮಳೆನೀರನ್ನು ಸಂಗ್ರಹಿಸಿ ನೀರಿನ ದಾಹ ತೀರಿಸಿ, ಹರಿಯುವ ನೀರನ್ನು ಅಡ್ಡಗಟ್ಟು- ಮುಂಬರುವ ಬರವನ್ನು ದೂರ ಅಟ್ಟು, ಹೀಗೆ ಮುಂತಾದ ಫಲಕಗಳನ್ನು ಪ್ರದರ್ಶಿಸುವ ಮೂಲಕ ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ವಿದ್ಯಾರ್ಥಿ ಮುಖಂಡರಾದ ಅಶೋಕ್ ಬಾಗಲವಾಡ ಹಾಗೂ ಮಧು ಅವರು ಮಾತನಾಡಿ, ನೀರಿನ ಮಹತ್ವ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಮಾತನಾಡಿ ಅತ್ಯಲ್ಪ ಪ್ರಮಾಣದಲ್ಲಿರುವ ನೀರು ಈಗಾಗಲೇ ಮಿತಿ ಮೀರುತ್ತಿರುವ ಜನಸಂಖ್ಯೆಗೆ ಅನಗುಣವಾಗಿ ಪೂರೈಕೆಯನ್ನು ಮೀರಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಎಲ್ಲರಿಗೂ ಮೂಲ ಸೌಲಭ್ಯವಾಗಿ ನೀರು ಒದಗಿಸುವುದೇ ಒಂದು ಸವಾಲಾಗಿದೆ. ಹಾಗಾಗಿ ಆ ಸವಾಲನ್ನು ಪರಿಹರಿಸಲು ನೀರಿನ ಮಿತವ್ಯಯ ಬಳಕೆ ಒಂದೇ ಪರಿಹಾರ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದರು