ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಮನವಿ

ಲಿಂಗಸುಗೂರು.ಮಾ.೩೧-ಲಿಂಗಸುಗೂರು ತಾಲೂಕಿನ ನೀರಾವರಿ ಯೋಜನೆಗಳಾದ ಬಹುಮುಖ್ಯವಾದ ನೀರಾವರಿ ಯೋಜನೆ ರಾಂಪುರ ಏತ ನೀರಾವರಿ ಯೋಜನೆ ಮತ್ತು ನಾರಾಯಣಪುರ ಬಲದಂಡೆ ನೀರಾವರಿ ಯೋಜನೆ ರೈತರ ಜಿವನಾಡಿಯಾದ ಪ್ರಮುಖ ಯೋಜನೆಯಾಗಿದೆ ರೈತರು ಬೆಳೆದ ಬೆಳೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ
ಗೋವಿಂದ ಕಾರಜೋಳ ಅವರಿಗೆ ರೈತರು ಬೆಳೆದ ಬೆಳೆಗಳಿಗೆ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬರುವ ಜಮಿನುಗಳಿಗೆ ನೀರು ಬಿಡಲು ಸಚಿವರಿಗೆ ಮನವಿ ಮಾಡಿದರು.
ಬಸವಸಾಗರ ಜಲಾಶಯದಿಂದ ಬಲದಂಡೆ ಕಾಲುವೆಯ ಮೂಲಕ ನೀರು ಹರಿಸಿ ರೈತರ ರಕ್ಷಣೆಗೆ ಮುಂದಾಗಬೇಕು ನೀರಾವರಿ ಸಲಹಾ ಸಮಿತಿಯಲ್ಲಿ ಲಭ್ಯವಿರುವ ನೀರಿನ ಸಂಗ್ರಹ ನೊಡಿ ಏಪ್ರಿಲ್ ೨೦ರವಗೆ ನೀರು ಹರಿಸಿದರೆ ಉತ್ತಮ ಎಂದು ತಾಲೂಕಿನ ರೈತರ ಬೆಳೆದ ವಿವಿಧ ಬೆಳೆಗಳ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಸಚಿವರಿಗೆ ನೀಡಿದರು.
ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ನಿಮ್ಮ ತಾಲೂಕಿನ ರೈತರಿಗೆ ಕೃಷಿ ಕೂಲಿಕಾರರಿಗೆ ಅನುಕೂಲವಾಗುವ ರೀತಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು
ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಡಿ.ಎಸ್. ಹೂಲಗೇರಿ ಮಾನ್ಯ ಶಾಸಕರು ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಇವರು. ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ ೨೦ ರ ವರೆಗೆ ನೀರು ಹರಿಸಲು ರೈತರ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾನ್ಯ ಶಾಸಕರು ಕೂಡಲೇ ಗೋವಿಂದ, ಎಂ.ಕಾರಜೋಳ ರವರು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ನೀರಾವರಿ ಸಲಹಾ ಸಮಿತಿ, ಕೃಷ್ಣಾ ಮೇಲ್ದಂಡೆ ಯೋಜನೆ ಇವರನ್ನು ಬೆಳಗಾವಿ ನಲ್ಲಿ ಭೇಟಿಯಾಗಿ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಏಪ್ರಿಲ್ ೨೦ರ ವರೆಗೆ ನೀರು ಹರಿಸಲು. ಮನವಿ ಮಾಡಿದರು ಶಾಸಕರ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿಗಳು ಕೂಡಲೇ ಮುಖ್ಯ ಅಭಿಯಂತರರು ಆಲಮಟ್ಟಿ ಡ್ಯಾಮ್ ಇವರಿಗೆ ದೂರವಾಣಿ ಮುಖಾಂತರ ಮಾತನಾಡಿ ಶಾಸಕರ ಮನವಿಯಂತೆ ಏಪ್ರಿಲ್ ೫ ರವರೆಗೂ ಕಾಲುವೆಗಳಿಗೆ ನೀರು ಹರಿಸಲು ಹಾಗೂ ಡ್ಯಾಮಿನಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ಮತ್ತೆ ಮುಂದೆ ನೀರು ಹರಿಸಲು ಕ್ರಮ ವಹಿಸುವಂತೆ ಸೂಚಿಸಿದರು.