ಧಾರವಾಡ,ಜೂ.25: ನೀರು ಸೃಷ್ಟಿಯಅಮೂಲ್ಯಕೊಡುಗೆ. ನಾಳೆಗಾಗಿ, ನಮಗಾಗಿ, ನಮ್ಮಜನರಿಗಾಗಿ ನೀರನ್ನು ಮಿತವಾಗಿ ಬಳಕೆ ಮಾಡಬೇಕುಎಂದುಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಅಧೀಕ್ಷಕಅಭಿಯಂತರ ಬಿ.ವಾಯ್. ಬಂಡಿವಡ್ಡರ ಹೇಳಿದರು.
ಅವರುತಾಲೂಕಿನಕರಡಿಗುಡ್ಡ ಸರಕಾರಿ ಪ್ರೌಢಶಾಲೆಯಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದಡಿಯಲ್ಲಿ ಆಯೋಜಿಸಿದ್ದ `ಜಲ ಸಂಪನ್ಮೂಲ ನಿರ್ವಹಣೆ – ಇಂದು, ನಾಳೆಗಾಗಿ’ ವಿಷಯಕುರಿತುಉಪನ್ಯಾಸ ನೀಡಿ ಮಾತನಾಡಿದರು.
ಭೂಮಿಯ ಮುಕ್ಕಾಲು ಭಾಗ ನೀರಿನಿಂದಆವೃತ್ತವಾಗಿದ್ದರೂಅದರಲ್ಲಿ ಸಿಹಿ ನೀರಿನ ಪ್ರಮಾಣಅಲ್ಪಪ್ರಮಾಣವಾಗಿದ್ದು, ಭಾರತದಲ್ಲಿ ನೀರಿನ ವೈಜ್ಞಾನಿಕ ನಿರ್ವಹಣೆ ಸಾಕಷ್ಟು ಪ್ರಮಾಣದಲ್ಲಿಆಗಿಲ್ಲ. ನೀರಿನ ದುರ್ಬಳಕೆಯಿಂದ ಮುಂದಿನ ಪೀಳಿಗೆ ನೀರಿಗಾಗಿ ಪರಿತಪಿಸಬೇಕಾಗುತ್ತದೆ.ಪ್ರತಿಯೊಬ್ಬರೂ ಸ್ವಯಂ ಸ್ಪೂರ್ತಿಯಿಂದ ನೀರಿನ ಸದ್ಭಳಕೆ ಮಾಡಿಕೊಳ್ಳಬೇಕು.ಇಂದು ಜಲವೇ ಒಂದುರೀತಿ ನಮ್ಮಜೀವನವಾಗಿದೆ.ನಿರ್ಲಕ್ಷದಿಂದ ಹರಿಬಿಟ್ಟ ಸೆಕೆಂಡಿಗೆಒಂದು ಹನಿಯಷ್ಟು ನೀರುಒಂದು ದಿನಕ್ಕೆ 41.04 ಲೀಟರನಷ್ಟಾಗುತ್ತದೆ.ವರ್ಷಕ್ಕೆ 15000 ಸಾವಿರ ಲೀಟರನಷ್ಟಾಗುತ್ತದೆ.ನಿರ್ಲಕ್ಷದ ಹನಿಯಿಂದಇಷ್ಟೊಂದು ಪೋಲಾಗಬೇಕಾದರೆ, ನೀರನ್ನು ಪೋಲು ಮಾಡದೆ ನಾವುಗಳು ನೀರಿನ ಸಂರಕ್ಷಣೆಗಾಗಿ ಹಾಗೂ ಸದ್ಭಳಕೆಗಾಗಿ ಹರಿಯುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ನಿಲ್ಲುವಂತೆ ಮಾಡಿ, ನಿಂತ ನೀರನ್ನುಇಂಗುವಂತೆ ಮಾಡಿಅಂತರ್‍ಜಲವನ್ನು ಹೆಚ್ಚಿಸಬೇಕು.ನೀರಿನ ದುರ್ಬಳಕೆಯಿಂದ ಭೂಮಿಯ ಫಲವತ್ತತೆಕೂಡಕಡಿಮೆಯಾಗಿ ಬೆಳೆಹಾನಿ ಸಂಭವಿಸುತ್ತದೆ. ವಿದ್ಯಾರ್ಥಿಗಳು ನೀರಿನ ಮಿತ ಬಳಕೆಯ ಬಗ್ಗೆ ಅರಿವು ಹೊಂದಬೇಕೆಂದು ಹೇಳಿದರು.
ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ನಂದೀಶ ಕಾಖಂಡಕಿ ಮಾತನಾಡಿ, ಹನಿ ನೀರುಅಮೃತಕ್ಕೆ ಸಮಾನ. ವಿದ್ಯಾರ್ಥಿಗಳು ತಮ್ಮ ನೆರೆಹೊರೆಯವರಿಗೆ ನೀರಿನ ಮಹತ್ವಕುರಿತು ಸಾಕ್ಷರತೆಯ ಮೂಲಕ ಜನಜಾಗೃತಿ ಮೂಡಿಸಬೇಕೆಂದು ಹೇಳಿದರು.ಡೈಟ್‍ನ ಹಿರಿಯಉಪನ್ಯಾಸಕಅರ್ಜುನ ಕಾಂಬೋಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಬಸವರಾಜಗುತ್ತೆಪ್ಪನವರ ಮಾತನಾಡಿ, ಭೂಮಿಯ ಮೇಲೆ ಸಕಲ ಜೀವರಾಶಿಗಳಿಗೂ ನೀರುಅಗತ್ಯವಾಗಿದ್ದು ನೀರಿಲ್ಲದೆಯಾವಜೀವ ರಾಶಿಗಳು ಬದುಕಲುಅಸಾಧ್ಯ.ನೀರನ್ನು ಪ್ರತಿಯೊಬ್ಬರೂ ಸಮರ್ಪಕವಾಗಿಯೋಜನಾಬದ್ಧವಾಗಿಉಪಯೋಗಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿಅಧ್ಯಕ್ಷರಾದ ಸುರೇಖಾ ಉಳ್ಳಿಗೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 16 ಜನ ವಿದ್ಯಾರ್ಥಿಗಳಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಬಹುಮಾನ ವಿತರಿಸಲಾಯಿತು.