ನೀರು ಸರಬರಾಜು ಯೋಜನೆಗೆ ಡಿಸಿಎಂ ಲೋಕಾರ್ಪಣೆ

ಬಾಗಲಕೋಟೆ,ನ.02 : ಸಿಮೆಂಟ್ ಫ್ಯಾಕ್ಟರಿ ಕ್ವಾರಿಯಿಂದ ಹಳೇ ಬಾಗಲಕೋಟೆ ಪಟ್ಟಣಕ್ಕೆ ವಿಸ್ತøತ ನೀರು ಸರಬರಾಜು ಯೋಜನೆಯನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳÀ ಲೋಕಾರ್ಪಣೆಗೊಳಿಸಿದರು.
ನಗರದ ನಾಡಗೌಡ ಬಡಾವಣೆ, ರೇಲ್ವೆ ನಿಲ್ದಾಣದ ಹತ್ತಿರ ನಿರ್ಮಿಸಲಾದ ಈ ಯೋಜನೆಗೆ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು 10.56 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದ್ದು, ಈ ಯೋಜನೆ ಕಾರ್ಯವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಹಳೆಯ ಬಾಗಲಕೋಟೆಯ ಜನರಿಗೆ 247 ಮಾದರಿಯ ನೀರು ಸರಬರಾಜು ಮಾಡಲು ತಿಳಿಸಿದರು. ಶಾಸಲ ವೀರಣ್ಣ ಚರಂತಿಮಠ ಮಾತನಾಡಿ ನೀರು ಸರಬರಾಜು ಯೋಜನೆಯ ಕಾಮಗಾರಿ ಜನವರಿ 2016 ರಿಂದ ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿತ್ತು. 11.20 ಎಂ.ಎಲ್.ಡಿ ಜಲಶುದ್ದೀಕರಣ ಘಟಕದ ಬಾಕಿ ಉಳಿದ ಕಾಮಗಾರಿಗಳನ್ನು ಮೂಲ ಗುತ್ತಿಗೆದಾರರನ್ನು ಬ್ಲಾಕ್‍ಲಿಸ್ಟ್‍ಗೆ ಹಾಕಿ ಬೇರೆ ಗುತ್ತಿಗೆದಾರರಿಂದ ಕೈಗೆತ್ತಿಕೊಂಡು ನವೆಂಬರ 2018 ರಿಂದ ಪೂರ್ಣಗೊಳಿಸಲಾಗುತ್ತು ಎಂದರು. ಅಮೃತ ಯೋಜನೆಯಡಿ 247 ಮಾದರಿಯ ನೀರು ಸರಬರಾಜು ವಿತರಣಾ ಕೊಳವೆ ಮಾರ್ಗವನ್ನು ಜೈನ್ ಗುತ್ತಿಗೆದಾರರಿಂದ ಕೈಗೆತ್ತಿಕೊಂಡು ಝೋನ-1ರಲ್ಲಿ ನೀರು ಸರಬರಾಜು ಯೋಜನೆ ಲೋಕಾರ್ಪಣೆಗೊಳಿಸಲಾಗಿದೆ. ಝೋನ್-2ರ ವಿತರಣಾ ಕೊಳವೆ ಮಾರ್ಗ ಇನ್ನು ಎರಡು ತಿಂಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ಜನವರಿ 2021 ರಿಂದ ಪೂರ್ಣ ಪ್ರಮಾಣದಲ್ಲಿ ಹಳೆ ಬಾಗಲಕೋಟೆ ಪಟ್ಟಣಕ್ಕೆ 24*7 ಮಾದರಿಯ ನೀರು ಸರಬರಾಜು ಮಾಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾದ್ಯಕ್ಷ ಬಸವರಾಜ ಅವರಾದಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ವಿಜಯಪುರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎಸ್.ಎಸ್.ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುರಾಜ ಬಂಗಿನ್ನವರ, ನಗರಸಭೆ ಆಯುಕ್ತ ಮುನಿಷಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.