
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.07; ತಮ್ಮನ್ನು ಖಾಯಂ ಮಾಡುವುದು ಸೇರಿದಂತೆ. ಹಕವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು. ಎರೆಡನೇ ದಿನವಾದ ಇಂದು ಸತ್ಯಸಗ್ರಹ ಕ್ಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು ಅವರ ಜೊತೆ ಸತ್ಯಾಗ್ರಹ ಸ್ಥಳಕ್ಕೆ ತೆರಳಿದ ಯುವ ಕಾಂಗ್ರೆಸ್ ಮುಖಂಡ ನಾರಾ ಭರತ್ ರೆಡ್ಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಇವರಿಗೆ ಪಾಲಿಕೆ ಸದಸ್ಯೆ ಉಮಾದೇವಿ ಶಿವರಾಜ್, ಪಿ.ಗಾದೆಪ್ಪ, ಮುಖಂಡ ಬೆಣಕಲ್ ಬಸವರಾಜಗೌಡ ಮೊದಲಾದವರು ಸಾಥ್ ನೀಡಿದ್ದರು.