ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಡಿ.03:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಕುರಿಕೋಟಾ ಆರ್‍ಡಬ್ಲ್ಯೂಪಿಎಸ್‍ನಿಂದ ಓಲ್ಡ ಫಿಲ್ಟರ್ ಬೆಡ್ ಮದ್ಯಂತರ 600ಮಿ.ಮೀ. ಎಂ.ಎಸ್. ಪೈಪ್‍ನಲ್ಲಿ ಸೋರಿಕೆ ಕಂಡು ಬಂದಿದ್ದು, ಇದರ ತುರ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 4 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಲಬುರಗಿ ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಮದ್ಯಂತರ ಪಂಪಿನ ಮನೆಗಳಿಗೆ ಅವಲಂಭಿಸಿರುವ ಕಲಬುರಗಿ ನಗರದ ಶಿವಶಕ್ತಿ ನಗರ, ಸುವರ್ಣ ನಗರ, ಬಂಬೂ ಬಜಾರ್, ಆಶ್ರಯ ಕಾಲೋನಿ, ಜಿಡಿಎ ಕಾಲೋನಿ, ಖಾಜಾ ಕಾಲೋನಿ, ಸಂಜೀವ್ ನಗರ, ಅಲ್ಲಾಬಾದ್ ಕಾಲೋನಿ, ಮಕ್ತಂಪುರ್, ಅಪ್ಪರ್ ಚಂದ್ರೇಸವಾಡಿ, ಹುಲಿಗಟ್ಟ, ಗದ್ಗಿಮಠ, ಮಿಲನ್ ಚೌಕ್, ಲೋವರ್ ಜಗತ್, ಗುಬ್ಬಿ ಕಾಲೋನಿ, ಪ್ರಗತಿ ಕಾಲೋನಿ, ಲೇಬರ್ ಕಾಲೋನಿ ಮತ್ತು ಆದರ್ಶ ನಗರ, ಜಿಡಿಎ 3ನೇ ಬ್ಲಾಕ್‍ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ.