ನೀರು ಮಿತ ಬಳಕೆಗೆ ಸಲಹೆ

ಮಾಲೂರು,ಮಾ೨೯- ಪ್ರತಿಯೊಬ್ಬರು ನೀರನ್ನು ಇತ ಮಿಥವಾಗಿ ಬಳಿಸಿ ಉಳಿಸಿ ಮುಂದಿನ ಪಿಳಿಗೆಯ ಆಸ್ತಿಯನ್ನಾಗಿಸುವುದು ಅನಿವಾರ್ಯವಾಗಿದೆ ಎಂದು ಮಂಜುಳ ಭೀಮ್ ರಾವ್ ತಿಳಿಸಿದರು.ಪಟ್ಟಣದ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ಯಾರೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಲ ಸಂರಕ್ಷಣೆ ಕಾರ್ಯಕ್ರಮ ಕುರಿತು ಮಾತನಾಡಿದರು. ಹನಿ ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾ.೨೨ ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ನಾವು ಪೋಲು ಮಾಡುವ ಒಂದೊಂದು ಹನಿ ನೀರಿನಿಂದ ಒಂದು ಜೀವ ಉಳಿಯಬಹುದು. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿ ಜೀವಜಲವೂ ಅತ್ಯಮೂಲ್ಯ; ನೀರಿನ ಮಿತಬಳಕೆ ಮಾಡುವ ಸಂಕಲ್ಪ ಇಂದೇ ಮಾಡೋಣ. ಸಾಧ್ಯವಾದಷ್ಟು ನೀರನ್ನು ಮಿತವಾಗಿ ಬಳಸೋಣ. ಒಂದೊಂದು ಜೀವವನ್ನೂ ಉಳಿಸೋಣ. ಜೀವ ಜಲ ನೀರನ್ನು ಸಂರಕ್ಷಿಸೋಣ.
ನೀರಿನ ಮೌಲ್ಯವು ಅದರ ಬೆಲೆಗಿಂತ ಹೆಚ್ಚಿನದಾಗಿದೆ. ಈ ಸಾರ್ವತ್ರಿಕ ದ್ರಾವಕವು ನಮ್ಮ ಮನೆ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಮ್ಮ ನೈಸರ್ಗಿಕ ಪರಿಸರದ ಸಮಗ್ರತೆಗೆ ಅಗಾಧ ಮತ್ತು ಸಂಕೀರ್ಣ ಮೌಲ್ಯವನ್ನು ಹೊಂದಿದೆ. ಈ ಯಾವುದೇ ಮೌಲ್ಯಗಳನ್ನು ನಾವು ಕಡೆಗಣಿಸಿದರೆ, ಈ ಸೀಮಿತ, ಭರಿಸಲಾಗದ ಸಂಪನ್ಮೂಲವನ್ನು ನಾವು ತಪ್ಪಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ ಆದ್ದರಿಂದ ನಾವು ಈ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಪ್ರತಿಯೊಬ್ಬರೂ ನೀರಿನ ಪ್ರಾಮುಖ್ಯತೆಯನ್ನು ಅರಿಯಬೇಕಾಗಿದೆ. ನೀರಿನ ಮೂಲಗಳಾದ ಕೆರೆ, ಕಟ್ಟೆ, ಗೋ ಕುಂಟೆ ಸಂರಕ್ಷಣೆ ಮಾಡುವುದು, ನೀಲಗಿರಿಯನ್ನು ನಿರ್ಮೂಲನೆ ಮಾಡುವುದು, ನೀರನ್ನು ಮಿಥವಾಗಿ ಬಳಕೆ ಮಾಡುವುದು, ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಬಚ್ಚಲು ಗುಣಿ, ಕೆರೆ ಮತ್ತು ಸ್ಮಶಾನದಲ್ಲಿ ಅರಣ್ಯ ಸಸಿಗಳನ್ನು ನೆಡುವ ಮುಖಾಂತರ ಜಲ ಸಂರಕ್ಷಣೆಯನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಶಿಕ್ಷಕಿ ಮೇರಿ ಸುಮತಿ, ಸ್ವರ್ಣಲತ, ಉಷ, ಸಿಂಧು, ಲೀಲಾವತಿ, ಶಶಿಧರ್, ರಾಜಣ್ಣ, ಇನ್ನಿತರರು ಹಾಜರಿದ್ದರು.