ನೀರು ಬಿಡಲು ಆಗ್ರಹಿಸಿ ನಾಳೆ ಪಟ್ಟಣದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.02: ಏ.15ರ ವರೆಗೆ ತುಂಗಭದ್ರಾ ಕಾಲುವೆಗೆ(ಬಾಗೇವಾಡಿ) ನೀರು ಹರಿಸುವಂತೆ ಒತ್ತಾಯಿಸಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ಮುಖಂಡ ಬಿ.ಮಲ್ಲಿಕಾರ್ಜುನ ತಿಳಿಸಿದರು,
ತೆಕ್ಕಲಕೋಟೆ ,ಬಲುಕುಂದಿ, ಹಳೆಕೋಟೆ, ಉಪ್ಪರಹೋಸಳ್ಳಿ, ಬಂಗರ ರಾಜು ಕ್ಯಾಂಪ್ ದೇವಿನಗರ ಸೇರಿದಂತೆ ಇತರೆ ಗ್ರಾಮಗಳ ರೈತರು ಪ್ರತಿಭಟನೆ ಯಲ್ಲಿ ಭಾಗವಹಿಸಲಿದ್ದು ಸೂಕ್ತ ಬಂದೂಬಸ್ತ ಒದಗಿಸುವಂತೆ ತೆಕ್ಕಲಕೋಟೆ ಪೊಲೀಸ್ ಠಾಣೆಯ ಸಿ.ಪಿ.ಐ ಸುಂದರೇಶ್ ಪಿ.ಎಚ್  ರವರಿಗೆ ಮನವಿ ಪತ್ರ ಸಲ್ಲಿಸಿದರು.
ಜ್ಞಾನ ನಂದಸ್ವಾಮಿ, ನೆಣಿಕೆಪ್ಪ, ಮಂಜು, ಗುರುಸಿದ್ದಪ್ಪ, ಬಂದೇನವಾಜ, ಮಾಬುಹುಸೇನಿ, ಉಸ್ಮನ್, ಮಾರೆಪ್ಪ, ಪಿ.ಹನುಮಂತ, ಬಂಡಿ ಮಲ್ಲಯ್ಯ ವಿಶ್ವನಾಥ, ಇತರೆ ರೈತ ಮುಖಂಡರು ಇದ್ದರು.